ಮುಂದುವರಿದ ‘ಫ್ಲಾರೆನ್ಸ್’ ಪ್ರವಾಹ: ಮೃತರ ಸಂಖ್ಯೆ 31ಕ್ಕೆ

Update: 2018-09-18 14:36 GMT

  ರಾಲೀ (ನಾರ್ತ್ ಕರೋಲಿನ), ಸೆ. 18: ‘ಫ್ಲಾರೆನ್ಸ್’ ಚಂಡಮಾರುತದ ದಾಳಿಗೆ ಸಿಲುಕಿರುವ ಅಮೆರಿಕದ ಪೂರ್ವ ಕರಾವಳಿಯಲ್ಲಿ ಸೋಮವಾರ ನದಿಗಳು ಇನ್ನಷ್ಟು ಉಕ್ಕೇರಿದ್ದು ಪ್ರವಾಹ ಪರಿಸ್ಥಿತಿ ಬಿಗಡಾಯಿಸಿದೆ.

ಈ ನಡುವೆ, ಚಂಡಮಾರುತದಿಂದಾಗಿ ಪ್ರಾಣ ಕಳೆದುಕೊಂಡವರ ಸಂಖ್ಯೆ 31ಕ್ಕೇರಿದೆ.

‘‘ನದಿಗಳ ಪ್ರವಾಹ ಮಟ್ಟ ಹೆಚ್ಚುತ್ತಿದೆ ಹಾಗೂ ನಮ್ಮ ಇಡೀ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿಯಿದೆ’’ ಎಂದು ನಾರ್ತ್ ಕರೋಲಿನ ಗವರ್ನರ್ ರಾಯ್ ಕೂಪರ್ ಸುದ್ದಿಗಾರರಿಗೆ ತಿಳಿಸಿದರು.

‘‘ಇದೊಂದು ಬೃಹತ್ ಬಿರುಗಾಳಿಯಾಗಿದೆ ಹಾಗೂ ಅದು ಈಗಲೂ ಮುಂದುವರಿಯುತ್ತಿದೆ. ಇದು ನಮ್ಮ ರಾಜ್ಯಕ್ಕೆ ಅಪ್ಪಳಿಸಿದ ಬೃಹತ್ ದುರಂತವಾಗಿದೆ’’ ಎಂದು ಅವರು ಹೇಳಿದರು.

 ನಾರ್ತ್ ಕ್ಯಾರಲೈನದಾದ್ಯಂತ ಇರುವ ಡಝನ್‌ಗೂ ಅಧಿಕ ನದಿಗಳಲ್ಲಿ ಸೋಮವಾರ ಭಾರೀ ಪ್ರವಾಹ ಹರಿಯುತ್ತಿತ್ತು ಹಾಗೂ ಪ್ರವಾಹವು ಅಪಾಯಕಾರಿ ಮಟ್ಟಕ್ಕೆ ಏರುವ ಭೀತಿ ಉಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News