ಕೊರಿಯ ನಾಯಕರ ಶೃಂಗ ಸಮ್ಮೇಳನ
Update: 2018-09-18 20:04 IST
ಸಿಯೋಲ್ (ದಕ್ಷಿಣ ಕೊರಿಯ), ಸೆ. 18: ಉತ್ತರ ಕೊರಿಯದ ನಾಯಕ ಕಿಮ್ ಜಾಂಗ್ ಉನ್ ಜೊತೆಗಿನ ಶೃಂಗ ಸಮ್ಮೇಳನಕ್ಕಾಗಿ ದಕ್ಷಿಣ ಕೊರಿಯ ಅಧ್ಯಕ್ಷ ಮೂನ್ ಜೇ ಇನ್ ಮಂಗಳವಾರ ಉತ್ತರ ಕೊರಿಯ ರಾಜಧಾನಿ ಪ್ಯಾಂಗ್‌ಯಾಂಗ್‌ಗೆ ತೆರಳಿದರು.
ಉತ್ತರ ಕೊರಿಯ ಮತ್ತು ಅಮೆರಿಕಗಳ ನಡುವಿನ ಸ್ಥಗಿತಗೊಂಡಿರುವ ಪರಮಾಣು ನಿಶ್ಶಸ್ತ್ರೀಕರಣ ಮಾತುಕತೆಗಳಿಗೆ ಮರುಚಾಲನೆ ನೀಡುವ ಉದ್ದೇಶದಿಂದ ಈ ಸಭೆ ನಡೆಯುತ್ತಿದೆ.
ಇದು ಈ ಇಬ್ಬರು ನಾಯಕರ ನಡುವೆ ಈ ವರ್ಷ ನಡೆಯುತ್ತಿರುವ ಮೂರನೇ ಶೃಂಗ ಸಮ್ಮೇಳನವಾಗಿದೆ.
ದಕ್ಷಿಣ ಕೊರಿಯ ಅಧ್ಯಕ್ಷರನ್ನು ಉತ್ತರ ಕೊರಿಯ ಅಧ್ಯಕ್ಷರು ಪ್ಯಾಂಗ್‌ಯಾಂಗ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಉಭಯ ನಾಯಕರ ಜೊತೆ ಅವರ ಪತ್ನಿಯರಿದ್ದರು.