ಸೆ. 22: ಆನ್‌ಲೈನ್‌ನಲ್ಲಿ ಬ್ಯಾರಿ ಅನುವಾದ ಸ್ಪರ್ಧೆ

Update: 2018-09-18 14:56 GMT

ಮಂಗಳೂರು, ಸೆ.18: ದೇರಳಕಟ್ಟೆಯ ‘ಮೇಲ್ತೆನೆ’ ಸಂಘಟನೆಯ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆಯ ಪ್ರಯುಕ್ತ ಸೆ.22ರಂದು ಸಂಜೆ 7ರಿಂದ 8ರೊಳಗೆ ಆನ್‌ಲೈನ್‌ನಲ್ಲಿ ಬ್ಯಾರಿ ಅನುವಾದ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಗಾಗಿ ‘ಮೇಲ್ತೆನೆ ಅನುವಾದ ಪಂತ’ ವಾಟ್ಸ್‌ಆ್ಯಪ್ ಗ್ರೂಪ್ ತೆರೆಯಲಾಗಿದೆ. ಇದರಲ್ಲಿ ಮೇಲ್ತೆನೆಯ ಸದಸ್ಯರು ಮತ್ತು ಕುಟುಂಬಸ್ಥರನ್ನು ಹೊರತುಪಡಿಸಿ ಉಳಿದಂತೆ ಎಲ್ಲರೂ ಮುಕ್ತವಾಗಿ ಭಾಗವಹಿಸಬಹುದು.

ಸ್ಪರ್ಧೆಯ ದಿನದಂದು ಸಂಜೆ 6:55 ನಿಮಿಷಕ್ಕೆ 2 ಕನ್ನಡ ಕಿರುಗತೆಗಳನ್ನು ‘ಮೇಲ್ತೆನೆ ಅನುವಾದ ಪಂತ’ದ ವಾಟ್ಸ್‌ಆ್ಯಪ್‌ನಲ್ಲಿ ಹಾಕಲಾಗುವುದು. ಅದನ್ನು ಬ್ಯಾರಿ ಭಾಷೆಗೆ ಅನುವಾದಿಸಿ (ಮೊಬೈಲ್‌ನಲ್ಲಿ ಕನ್ನಡ ಲಿಪಿ ಬಳಸಿ ಟೈಪ್ ಮಾಡಿ ಅಥವಾ ಸ್ಪಷ್ಟವಾಗಿ ಅರ್ಥವಾಗುವಂತೆ ಬಿಳಿ ಹಾಳೆಯಲ್ಲಿ ಬರೆದು ಅದರ ಫೋಟೋ ತೆಗೆದು) ಇಸ್ಮತ್ ಪಜೀರ್ ಮೊ.ಸಂ: 9880842203, ಬಶೀರ್ ಅಹ್ಮದ್ ಕಿನ್ಯಾ 9611289076. ನಿಯಾಝ್ ಪಡೀಲ್ 9740221152 ಈ ಮೂವರಲ್ಲಿ ಒಬ್ಬರ ಮೊಬೈಲ್ ಸಂಖ್ಯೆಗೆ ಕಳುಹಿಸಬೇಕು. ಯಾವುದೇ ಕಾರಣಕ್ಕೂ ಅನುವಾದ ಮಾಡಿದ್ದನ್ನು ‘ಮೇಲ್ತೆನೆ ಅನುವಾದ ಪಂತ’ ಗ್ರೂಪ್‌ಗೆ ಕಳುಹಿಸಬಾರದು. ಹಾಗೆ ಕಳುಹಿಸಿದರೆ ಅದನ್ನು ಪರಿಗಣಿಸಲಾಗುವುದಿಲ್ಲ.

ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನವನ್ನು ಅಕ್ಟೋಬರ್ 7ರಂದು ದೇರಳಕಟ್ಟೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ವಿತರಿಸಲಾಗುವುದು ಎಂದು ಪ್ರಧಾನ ಕಾರ್ಯದರ್ಶಿ ಹಂಝ ಮಲಾರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News