ಸಂತ ಅಲೋಶಿಯಸ್ ಕಾಲೇಜಿನಲ್ಲಿ ಉಪನ್ಯಾಸ ಕಾರ್ಯಕ್ರಮ

Update: 2018-09-18 15:00 GMT

ಮಂಗಳೂರು, ಸೆ.18: ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ ಚಟುವಟಿಕಾ ಸಂಘ ಮತ್ತು ವಿಮೆನ್ಸ್ ಫೋರಂ ವತಿಯಿಂದ ‘ಯಶಸ್ಸಿನೆಡೆಗೆ ನಮ್ಮ ನಡೆ’ ಎಂಬ ಪ್ರೇರಕ ಉಪನ್ಯಾಸ ಕಾರ್ಯಕ್ರಮವು ಸೋಮವಾರ ಕಾಲೇಜಿನ ಎಲ್.ಎಫ್. ರಸ್ಕಿನ್ಹಾ ಸಭಾಂಗಣದಲ್ಲಿ ನಡೆಯಿತು.

ಬೆಂಗಳೂರಿನ ಕ್ರಿಯೇಟಿವ್ ಟೀಚಿಂಗ್‌ನ ಅಧ್ಯಕ್ಷ ಡಾ. ಗುರುರಾಜ್ ಕರ್ಜಗಿ ಪ್ರೇರಕ ಉಪನ್ಯಾಸ ನೀಡಿದರು. ಪ್ರಾಂಶುಪಾಲ ರೆ.ಡಾ.ಪ್ರವೀಣ್ ಮಾರ್ಟಿಸ್ ಎಸ್.ಜೆ. ಅಧ್ಯಕ್ಷತೆ ವಹಿಸಿದ್ದರು. ಹಣಕಾಸು ಅಧಿಕಾರಿ ಫಾ.ಪ್ರದೀಪ್ ಸಿಕ್ವೇರ ಎಸ್.ಜೆ., ಅನ್ವಯಿಕ ಸಸ್ಯಶಾಸ್ತ್ರ ಸಂಶೋಧನಾ ಪ್ರಯೋಗಾಲಯದ ನಿರ್ದೇಶಕ ರೆ. ಡಾ. ಲಿಯೋ ಡಿಸೋಜ ಎಸ್.ಜೆ. ಉಪಸ್ಥಿತರಿದ್ದರು.

ವಿದ್ಯಾರ್ಥಿ ಚಟುವಟಿಕಾ ಸಂಘದ ಸಂಯೋಜಕ ಡಾ. ಈಶ್ವರ ಭಟ್ ಸ್ವಾಗತಿಸಿದರು. ವಿಮೆನ್ಸ್ ಫೋರಂನ ಸಂಯೋಜಕಿ ಡಾ. ಸರಸ್ವತಿ ಕುಮಾರಿ ಬಿ. ವಂದಿಸಿದರು. ರಾಜ್ಯಶಾಸ್ತ್ರ ವಿಭಾಗದ ಸಹಪ್ರಾಧ್ಯಾಪಕ ಆಲ್ವಿನ್ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News