ನ್ಯಾಷನಲ್ ವ್ಯುಮೆನ್ಸ್ ಫ್ರಂಟ್ ವತಿಯಿಂದ ನಗರ ಸಭಾ ಸದಸ್ಯೆ ಫಾತಿಮತ್ ಝೂರರಿಗೆ ಸನ್ಮಾನ

Update: 2018-09-18 15:26 GMT

ಮಂಗಳೂರು, ಸೆ. 18: ನ್ಯಾಷನಲ್ ವ್ಯುಮೆನ್ಸ್ ಫ್ರಂಟ್ ಪುತ್ತೂರು ಜಿಲ್ಲಾ ಸಮಿತಿ ವತಿಯಿಂದ ಕಳೆದ ನಗರಸಭೆಯ ಚುಣಾವಣೆಯಲ್ಲಿ ಬನ್ನೂರು 5ನೇ ವಾರ್ಡಿನಿಂದ ಎಸ್.ಡಿ. ಪಿ.ಐ ಪಕ್ಷದಿಂದ ಸ್ಪರ್ಧಿಸಿ ವಿಜಯಿಯಾದ ಫಾತಿಮತ್ ಝೂರ ಇವರಿಗೆ ಸನ್ಮಾನ ಕಾರ್ಯಕ್ರಮವನ್ನು ನಡೆಯಿತು.

ಈ ಕಾರ್ಯಕ್ರಮದಲ್ಲಿ ಜಿಲ್ಲಾ ಅಧ್ಯಕ್ಷೆ ಸಜರಾ ಹಮೀದ್ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಉಮೈರ ಶರೀಫ್ ಮತ್ತು ಜಿಲ್ಲಾ ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಸಫ್ರೀನ ಉಸ್ಮಾನ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News