ಸರಕು ಮತ್ತು ಸೇವಾ ತೆರಿಗೆ ಕಾಯ್ದೆ; ಸೆ.19ರಂದು ಕಾರ್ಯಾಗಾರ
Update: 2018-09-18 21:28 IST
ಉಡುಪಿ, ಸೆ.18: ಸರಕು ಮತ್ತು ಸೇವಾ ತೆರಿಗೆ ಕಾಯ್ದೆಯನ್ವಯ ಸಾರ್ವಜನಿಕ ಕಚೇರಿಗಳಲ್ಲಿ ನಡೆಸಲ್ಪಡುವ ಕಾಮಗಾರಿಗಳಿಗೆ ಮೂಲದಲ್ಲಿ ತೆರಿಗೆ ಕಡಿತಗಳಿಗೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯ ಹಣ ಸೆಳೆಯುವ ಹಾಗೂ ವಿತರಿಸುವ ಬಟಾವಡೆ ಅಧಿಕಾರಿಗಳಿಗೆ ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರಡಿ ಟಿಡಿಎಸ್ ನೋಂದಣಿ ಹಾಗೂ ಸೇವಾ ತೆರಿಗೆ ಕಾಯ್ದೆಯಡಿ ಟಿಡಿಎಸ್ ಕಟಾವಣೆ ಮಾಡುವ ವಿಧಾನಗಳಿಗೆ ಸಂಬಂಧಿಸಿದಂತೆ ಮಾಹಿತಿ ನೀಡಲು ಸೆ.19ರಂದು ಬೆಳಗ್ಗೆ 10ರಿಂದ ಅಪರಾಹ್ನ 1:30ರವರೆಗೆ ಮಣಿಪಾಲದ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಸರಕು ಮತ್ತು ಸೇವಾ ತೆರಿಗೆ ಕಾಯ್ದೆ 2017ರ ಪ್ರಕರಣ 51ರಂತೆ ಬಟವಾಡೆ ಅಧಿಕಾರಿಗಳು ಕಡ್ಡಾಯವಾಗಿ ನೋಂದಣಿ ಪಡೆದು ಟಿಡಿಎಸ್ ಕಟಾವಣೆ ಮಾಡಬೇಕಾಗಿದೆ. ಆದ್ದರಿಂದ ಎಲ್ಲಾ ಬಟವಾಡೆ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಪಡೆಯಲು ಕಾರ್ಯಾಗಾರಕ್ಕೆ ಹಾಜರಾಗುವಂತೆ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.