ತೆಲಂಗಾಣ ಮರ್ಯಾದಾ ಹತ್ಯೆ: ‘ದೃಶ್ಯಂ’ ಸಿನೆಮಾ ರೀತಿಯಲ್ಲಿ ತಪ್ಪಿಸಲು ಯತ್ನಿಸಿದ್ದ ಆರೋಪಿ

Update: 2018-09-19 15:11 GMT

ಹೈದರಾಬಾದ್, ಸೆ.19: ತೆಲಂಗಾಣದಲ್ಲಿ ನಡೆದ ಯುವಕನೊಬ್ಬನ ಮರ್ಯಾದಾ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಮತ್ತು ಯುವತಿಯ ತಂದೆಯಾಗಿರುವ ಟಿ.ಮಾರುತಿ ರಾವ್, ದೃಶ್ಯಂ ಸಿನೆಮಾದ ಮಾದರಿಯಲ್ಲಿ ಘಟನೆಗಳನ್ನು ಸೃಷ್ಟಿಸಿ ತನ್ನ ಮೇಲೆ ಅನುಮಾನ ಬಾರದಂತೆ ಮಾಡಲು ಯತ್ನಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಮಲಯಾಳಂನಲ್ಲಿ ನಿರ್ಮಾಣಗೊಂಡಿದ್ದ ದೃಶ್ಯಂ ಸಿನೆಮಾ ನಂತರ ತೆಲುಗಿನಲ್ಲೂ ತೆರೆಕಂಡಿತ್ತು. ಈ ಚಿತ್ರದಲ್ಲಿ ನಾಯಕ ತನ್ನ ಮಗಳಿಗೆ ಅನ್ಯಾಯ ಮಾಡಿದ ವ್ಯಕ್ತಿಯನ್ನು ಹತ್ಯೆ ಮಾಡಿದ ನಂತರ ಅದರಿಂದ ತಪ್ಪಿಸಿಕೊಳ್ಳಲು ಹಲವು ನಕಲಿ ಘಟನೆಗಳನ್ನು ಸೃಷ್ಟಿಸುವುದನ್ನು ತೋರಿಸಲಾಗಿತ್ತು. ಇದೇ ರೀತಿಯಲ್ಲಿ ಘಟನೆಗಳನ್ನು ಸೃಷ್ಟಿಸಲು ಮಾರುತಿ ರಾವ್ ಪ್ರಯತ್ನಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಸೆಪ್ಟಂಬರ್ 14ರಂದು ಘಟನೆ ನಡೆದ ದಿನ ಹತ್ಯೆಗೂ ಎರಡು ಗಂಟೆ ಮೊದಲು ಆರೋಪಿಯು ನಲಗೊಂಡದಲ್ಲಿರುವ ಜಂಟಿ ಆಯುಕ್ತರ ಕಚೇರಿಗೆ ತೆರಳಿ ಅಧಿಕಾರಿಗಳನ್ನು ಭೇಟಿಯಾಗಿದ್ದರು. ಅದೇ ದಿನ ನಲಗೊಂಡಕ್ಕೆ ತೆರಳುವ ಸಮಯದಲ್ಲಿ ಜಿಲ್ಲಾ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಮತ್ತು ಆರ್‌ಡಿಒರನ್ನೂ ಭೇಟಿಯಾದ ಮಾರುತಿ ತಮ್ಮ ಕಾರಿನಿಂದ ಇಳಿದು ಅವರೊಂದಿಗೆ ಗಣೇಶ ಹಬ್ಬದ ಬಗ್ಗೆ ಮಾತನಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News