ಕೇರಳ ಸಂತೃಸ್ತ ನಿಧಿಗೆ ಶಮ್ಸ್ ಶಾಲಾ ವಿದ್ಯಾರ್ಥಿಗಳಿಂದ ದೇಣಿಗೆ

Update: 2018-09-19 17:33 GMT

ಭಟ್ಕಳ, ಸೆ. 19: ಇಲ್ಲಿನ ಹೆಬಳೆ ಗ್ರಾ.ಪಂ.ವ್ಯಾಪ್ತಿಯ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂಶಮ್ಸ್ ಸ್ಕೂಲ್ ವಿದ್ಯಾರ್ಥಿಗಳಿಂದ ಇತ್ತೀಚೆಗೆ ಕೇರಳದಲ್ಲಿ ಸಂಭವಿಸಿ ಪ್ರಾಕೃತಿಕ ಅನಾಹುತದಲ್ಲಿ ಸಂತೃಸ್ತರ ಪರಿಹಾರ ನಿಧಿಗೆ ಒಟ್ಟು ಮಾಡಿದ ಸುಮಾರು 72 ಸಾವಿರ ಚೆಕ್ ನ್ನು ಕೇರಳ ಜಮಾಅತೆ ಇಸ್ಲಾಮಿಯ ಪರಿಹಾರ ನಿಧಿಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭಟ್ಕಳ ಜಮಾಅತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಮುಜಾಹಿದ್ ಮುಸ್ತಫಾ, ಮನುಷ್ಯರ ಮೇಲೆ ಕರುಣೆ ತೋರುವುದು ವಿದ್ಯಾರ್ಥಿ ದೆಸೆಯಿಂದಲೆ ಕಲಿತುಕೊಳ್ಳಬೇಕು. ಮನುಷ್ಯನ ಸೇವೆ ನಿಜವಾದ ಸೇವೆಯಾಗಿದ್ದು ನಮ್ಮಲ್ಲಿ ಮನುಷ್ಯರಿಗಾಗಿ ಮಿಡಿಯುವಂತಹ ಹೃದಯ ನೀಡುವಂತೆ ದೇವರಲ್ಲಿ ಬೇಡಿಕೊಳ್ಳಬೇಕು ಎಂದರು. 

ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ತಲ್ಹಾ ಸಿದ್ದಿಬಾಪ, ಆಡಳಿತ ಮಂಡಳಿ ಸದಸ್ಯ ಮೌಲಾನ ಅಝೀಝುರ್ರಹ್ಮಾನ್ ರುಕ್ನುದ್ದೀನ್ ನದ್ವಿ, ಮುಖ್ಯಾದ್ಯಾಪಕ ಮುಹಮ್ಮದ್ ರಝಾ ಮಾನ್ವಿ, ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News