ಕಲ್ಲಬೆಟ್ಟು ಸಂಜೀವ ಆಚಾರ್ಯ ನಿಧನ

Update: 2018-09-19 18:14 GMT

ಮೂಡುಬಿದಿರೆ, ಸೆ. 19: ಹಿರಿಯ ರಜತಶಿಲ್ಪಿ, ವಿಶ್ವಕರ್ಮ ಸಮಾಜದ ಮುಖಂಡ ಕಲ್ಲಬೆಟ್ಟು ಸಂಜೀವ ಆಚಾರ್ಯ (77) ಅಲ್ಪಕಾಲದ ಅಸೌಖ್ಯದಿಂದ ಬುಧವಾರ ಸ್ವಗೃಹದಲ್ಲಿ ನಿಧನರಾದರು.

ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿಯವರಾದ ಅವರು ಗೋಲ್ಡ್ ಕಂಟ್ರೋಲ್ ಕಾಯ್ದೆ ಜಾರಿಗೆ ಬಂದಾಗ ಸ್ವರ್ಣಶಿಲ್ಪ ಕಎಲಸವನ್ನು ಕೈ ಬಿಟ್ಟು ಮೂಡುಬಿದಿರೆಗೆ ಬಂದು ನೆಲೆಸಿ ರಜತ ಶಿಲ್ಪ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಕಟೀಲು ಮೇಳದ ರಜತ ತೂಗುಯ್ಯೆಲೆಯನ್ನು ರಚಿಸಿದ್ದ ಅವರು ಕರ್ನಾಟಕ ಹಾಗೂ ಕೇರಳದ ಹಲವಾರ ದೇವಸ್ಥಾನಗಳ ಧ್ವಜಸ್ಥಂಭಗಳಿಗೆ ತಾಮ್ರ ಹಾಗೂ ಹಿತ್ತಾಳೆಯ ಹೊದಿಕೆಯ ಕೆಲಸವನ್ನು ರಚಿಸಿದ್ದರು. ಅವಿಭಜಿತ ದ.ಕ. ಜಿಲ್ಲೆಯ ಹಲವಾರು ದೇವಸ್ಥಾನ, ಮಾರಿಗುಡಿ, ದೈವಸ್ಥಾಣಗಳ ಬೆಳ್ಳಿಯ ಅಷ್ಟ ಪ್ರಭಾವಳಿ, ದೈವದ ಅಣಿ, ಮತ್ತಿತರ ಬೆಳ್ಳಿ ಪರಿಕರಗಳನ್ನು ರಚಿಸಿಕೊಟ್ಟಿದ್ದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಕ್ರೀಯ ಸದಸ್ಯರಾಗಿದ್ದ ಅವರು ಕಲ್ಲಬೆಟ್ಟು ವಿಶ್ವಕರ್ಮ ಸಮಾಜ ಸೇವಾ ಸಂಘದ ಸ್ಥಾಪಕ ಅಧ್ಯಕ್ಷರಾಗಿ, ಕಲ್ಲಬೆಟ್ಟು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಮಾಜಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದ ಆಡಳಿತ ಸಮಿತಿಯ ಸದಸ್ಯರಾಗಿ, ಸಾಮಾಜಿಕ ಸಂಚಾಲಕರಾಗಿ ಕ್ಷೇತ್ರದ ಅಭಿವೃದ್ಧಿಗೆ ದುಡಿದಿದ್ದರು. ಅವರಿಗೆ ಇಬ್ಬರು ಪುತ್ರರು, ನಾಲ್ವರು ಪುತ್ರಿಯರು ಇದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News