ಏರ್ ಇಂಡಿಯಾ ಮಂಡಳಿಗೆ ಡಿ.ಪುರಂದೇಶ್ವರಿ ನೇಮಕ

Update: 2018-09-20 15:32 GMT

 ಹೊಸದಿಲ್ಲಿ,ಸೆ.20: ಡಿ.ಪುರಂದೇಶ್ವರಿ ಅವರನ್ನು ಏರ್ ಇಂಡಿಯಾ ಆಡಳಿತ ಮಂಡಳಿಗೆ ಸ್ವತಂತ್ರ ನಿರ್ದೇಶಕಿಯಾಗಿ ನೇಮಿಸಿ ಗುರುವಾರ ಅಧಿಕೃತ ಆದೇಶವನ್ನು ಹೊರಡಿಸಲಾಗಿದೆ.

 ಮೂರು ವರ್ಷಗಳ ಅವಧಿಗೆ ಏರ್ ಇಂಡಿಯಾ ಆಡಳಿತ ಮಂಡಳಿಗೆ ಅಧಿಕಾರೇತರ ಸ್ವತಂತ್ರ ನಿರ್ದೇಶಕಿಯಾಗಿ ಪುರಂದೇಶ್ವರಿ ಅವರ ನೇಮಕಕ್ಕೆ ಸಂಪುಟದ ನೇಮಕಗಳ ಸಮಿತಿಯು ಒಪ್ಪಿಗೆ ನೀಡಿದೆ ಎಂದು ಸಿಬ್ಬಂದಿ ಸಚಿವಾಲಯವು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News