ವಾಟ್ಸ್ ಆ್ಯಪ್ ನಲ್ಲಿ ಕೋಮು ಧ್ವೇಷ ಸಾರುವ ಸಂದೇಶ : ಆರೋಪಿಗೆ ನಿರೀಕ್ಷಣಾ ಜಾಮೀನು

Update: 2018-09-20 15:32 GMT

ಪುತ್ತೂರು,ಸೆ.20: ವಾಟ್ಸ್ ಆ್ಯಪ್ ನಲ್ಲಿ ಶಕುಂತಳಾ ಶೆಟ್ಟಿ ಅವರ ಬಗ್ಗೆ ಕೋಮುಧ್ವೇಷ ಸಾರುವ ಸಂದೇಶ ರವಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಪುತ್ತೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

'ಪುತ್ತೂರ್ದ ಮುತ್ತು' ವಾಟ್ಸಪ್ ಗ್ರೂಪ್‍ನ ಎಡ್ಮಿನ್ ಅಶೋಕ್ ಮಯ್ಯ ಜಾಮೀನು ಪಡೆದುಕೊಂಡವರು. ಈ ಗ್ರೂಪ್‍ಗೆ ಲೋಕೇಶ್ ಎಂಬವರು ಸಂದೇಶ ರವಾನಿಸಿದ್ದರು. ಆದರೆ ಸಂದೇಶದಲ್ಲಿ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಎಂದು ಉಲ್ಲೇಖಿಸಿಲ್ಲ ಎಂಬ ಅಶೋಕ್ ಮಯ್ಯ ಪರವಾದ ಮಂಡಿಸಿದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಅವರ ವಾದವನ್ನು ನ್ಯಾಯಾಲಯ ಪರಿಗಣಿಸಿ ಆಶೋಕ್ ಮಯ್ಯ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ. 

ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರದಾನ ಕಾರ್ಯದರ್ಶಿ ಅಮಳ ರಾಮಚಂದ್ರ ಅವರು ದೂರು ನೀಡಿದ್ದು, ಪುತ್ತೂರು ನಗರ ಪೊಲೀಸರು ಕೇಸು ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News