ಭಾಷೆಯ ಅತ್ಯಂತ ಸೂಕ್ಷ್ಮ ಅಭಿವ್ಯಕ್ತಿಯೇ ಕಾವ್ಯ : ಪರೀಕ್ಷಿತ್ ತೋಳ್ಪಾಡಿ

Update: 2018-09-20 18:24 GMT

ಪುತ್ತೂರು,ಸೆ.20; ಸಾಹಿತಿಗಳೆಂದರೆ ಭಾಷಾ ಭೂಮಿಯನ್ನು ಫಲವತ್ತುಗೊಳಿಸುವ ಎರೆಹುಳಗಳಂತೆ. ಭಾಷೆಯ ಅತ್ಯಂತ ಸೂಕ್ಷ್ಮ ಅಭಿವ್ಯಕ್ತಿಯೇ ಕಾವ್ಯ. ಇದನ್ನು ಸಾಧಿಸುವವನೇ ಕವಿಯಾಗುತ್ತಾನೆ. ಕಾವ್ಯಗಳು ವಕ್ರೋಕ್ತಿಯಾಗಿ ಕಾಣಿಸಿಕೊಂಡರೂ ಅದರಲ್ಲಿ ಬಿಂಬಿಸುವ ವಸ್ತು ಸೂಕ್ಷ್ಮತೆಯಿಂದ ಕವಿ ತನ್ನ ಆಶಯದಲ್ಲಿ ಯಶಸ್ಸುಗಳಿಸಬಲ್ಲ ಎಂದು ಅಂಬಿಕಾ ವಿದ್ಯಾಲಯದ ಉಪನ್ಯಾಸಕ ಪರೀಕ್ಷಿತ್ ತೋಳ್ಪಾಡಿ ಅಭಿಪ್ರಾಯ ಪಟ್ಟರು. 

ಅವರು ಪುತ್ತೂರು ಮಹಾಲಿಂಗೇಶ್ವರ ದೇವಳದ  ವಠಾರದಲ್ಲಿ ನಡೆಯುತ್ತಿರುವ ತಾಲೂಕು 18ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಕವಿಗಳಾದ ನಲ್ಕ ಗೋಪಾಲಕೃಷ್ಣ ಭಟ್, ವಿವಿಶ್ವನಾಥ್ ಕುಲಾಲ್, ಅಶ್ವಿನಿ ಕೋಡಿಬೈಲು, ಶಾರದಾ ಕೆಮ್ಮಾರ, ಇಂದಿರಾ ಕೆ.ಎಸ್, ಶಾಂತಾ ಕುಂಟಿನಿ, ಪ್ರಜ್ಞಾ ಕಾವು ಕನವ ವಾಚನ ಮಾಡಿದರು. 

ಗೋಷ್ಟಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಉಪಸ್ಥಿರಿದ್ದರು.  ಜೆಸ್ಸಿ ಪಿ.ಎ ಸ್ವಾಗತಿಸಿದರು. ಕೃಷ್ಣ ಭಟ್ ವಾಟೆಡ್ಕ ವಂದಿಸಿದರು. ಹರಿಣಾಕ್ಷಿ ಉಪ್ಪಿನಂಗಡಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News