ಕವ್ವಾಲಿ : ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ

Update: 2018-09-21 13:50 GMT

ಮಲ್ಪೆ, ಸೆ.21: ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್‌ನಲ್ಲಿ ಇತ್ತೀಚೆಗೆ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಮಲ್ಪೆ ಫ್ಲವರ್ಸ್ ಆಫ್ ಪ್ಯಾರಡೈಸ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಕವ್ವಾಲಿ ಕಿರಿಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗೆದ್ದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳಾದ ಸಫ ಹಲೀಮ, ಫೈಹ ಪರ್ವಿನ್, ನಿಧಾ ನಝೀಮ್ ಸರ್ದಾರ್, ಫೈಝ್ ಉಲ್ ರೆಹಮಾನ್, ಕಪ್ತಿ ಮೊಹಮ್ಮದ್ ಅತುಫ್, ಇಫ್ರ ಕಪ್ತಿ ಅವರ ತಂಡವು ಕವ್ವಾಲಿ ಕಿರಿಯರ ವಿಭಾಗದಲ್ಲಿ ಪ್ರಥಮ ಹಾಗೂ ಮಾಝಿನ್ ಕಪ್ತಿ, ಮೊಹಮ್ಮದ್ ರಯಾನ್, ಅಫಾನ್ ಮಿರ್ಝಾ ಉಸ್ಮಾನ್, ಮೊಹಮ್ಮದ್ ಮಸ್ತಫ, ಮೊಹಮ್ಮದ್ ಆಮಿಝ್, ಮೊಹಮ್ಮದ್ ಸಯೀದ್ ತಂಡವು ಕವ್ವಾಲಿ ಹಿರಿಯರ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News