ಕಾಸರಗೋಡು : ಅಪಘಾತಕ್ಕೀಡಾಗಿ ಕಾರಿನ ಮೇಲೆ ಬಿದ್ದ ಲಾರಿ

Update: 2018-09-21 14:32 GMT

ಕಾಸರಗೋಡು,ಸೆ.21 : ಲಾರಿ ಮತ್ತು ಕಾರು ಢಿಕ್ಕಿ ಹೊಡೆದ ಘಟನೆ ಇಂದು ಸಂಜೆ ಕಾಸರಗೋಡು- ಕಾಞ೦ಗಾಡ್ ರಾಜ್ಯ ಹೆದ್ದಾರಿಯಲ್ಲಿ ನಡೆದಿದ್ದು, ನಿಯಂತ್ರಣ ತಪ್ಪಿದ ಲಾರಿ ಸಮೀಪದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಬಳಿಕ ಕಾರಿನ ಮೇಲೆ ಮಗುಚಿ ಬಿದ್ದಿದೆ. 

ನಜ್ಜುಗುಜ್ಜಾದ ಕಾರಿನೊಳಗೆ ಸಿಲುಕಿದ್ದ  ಓರ್ವನನ್ನು ಗಂಟೆಗಳ ಪರಿಶ್ರಮದಿಂದ ಹೊರತೆಗೆಯಲಾಯಿತು. ಅಪಘಾತದಿಂದ ಪ್ರಜ್ಞೆ ಕಳೆದುಕೊಂಡ ಲಾರಿ ಚಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 

ಸಂಜೆ 3.30 ಕ್ಕೆ ಈ ಘಟನೆ ನಡೆದಿದೆ. 

ವಿದ್ಯುತ್  ಕಂಬಕ್ಕೆ  ಢಿಕ್ಕಿ ಹೊಡೆದರಿಂದ  ತಂತಿ ತುಂಡಾಗಿ ಬಿದ್ದು  ಲಾರಿ ಚಾಲಕನಿಗೆ  ವಿದ್ಯುತ್ ಶಾಕ್ ತಗಳಿರಬಹುದು ಎಂದು ಶಂಕಿಸಲಾಗಿದೆ. 

ಕಾರಿನಲ್ಲಿ ಸಿಲುಕಿದ್ದ  ಖಲೀಲ್ ನನ್ನು  ಕಾಸರಗೋಡಿನಿಂದ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ನಾಗರಿಕರು ಹರಸಾಹಸದಿಂದ ಹೊರತೆಗೆದರು. ಕ್ರೇನ್ ಬಳಸಿ ಲಾರಿಯನ್ನು ಮೇಲಕ್ಕೆತ್ತಲಾಯಿತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News