ನೇತ್ರಾವತಿ ನದಿ ನೀರಿನ ಮಟ್ಟ ಇಳಿಕೆ: ಮುಖ್ಯಮಂತ್ರಿ ಜೊತೆ ಸಚಿವ ಖಾದರ್ ಚರ್ಚೆ

Update: 2018-09-21 15:31 GMT

ಮಂಗಳೂರು, ಸೆ.21: ಕರಾವಳಿಯಾದ್ಯಂತ ಈ ಬಾರಿ ಭಾರೀ ಮಳೆ ಸುರಿದರೂ ಕೂಡಾ ದ.ಕ.ಜಿಲ್ಲೆಯ ಜೀವನಾಡಿಯಾದ ನೇತ್ರಾವತಿ ನದಿಯ ನೀರಿನ ಮಟ್ಟದಲ್ಲಿ ಅನಿರೀಕ್ಷಿತ ಇಳಿಕೆ ಕಂಡು ಬಂದ ಹಿನ್ನೆಲೆಯಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚೆ ನಡೆಸಿದ್ದಾರೆ.

ವಾಡಿಕೆಯ ಮಳೆ ಸುರಿದಾಗಲೆಲ್ಲಾ ನೇತ್ರಾವತಿ ನದಿ ನೀರಿನ ಮಟ್ಟ 21 ಇಂಚು ಇತ್ತು. ಆದರೆ, ಈ ಬಾರಿ ವಾಡಿಕೆಗಿಂತಲೂ ಕೂಡಾ ಅಧಿಕ ಮಳೆ ಸುರಿದಿದೆ. ಸೆಪ್ಟಂಬರ್‌ನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುತ್ತಲೇ ನದಿ ನೀರಿನ ಮಟ್ಟದಲ್ಲಿ ಭಾರೀ ಇಳಿಕೆ ಕಂಡು ಬಂದಿದೆ. ಇದು ಸ್ಥಳೀಯ ರೈತರ ಸಹಿತ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಮಳೆ ನಿಂತ 20 ದಿನದಲ್ಲೇ ನೇತ್ರಾವದಿ ನದಿ ನೀರಿನ ಮಟ್ಟ 13 ಇಂಚಿಗೆ ಇಳಿದಿರುವುದನ್ನು ಸಚಿವ ಖಾದರ್  ಕ್ಯಾಬಿನೆಟ್ ಸಭೆಯಲ್ಲಿ ಮುಖ್ಯಮಂತ್ರಿಯ ಗಮನ ಸೆಳೆದರು. ಅಲ್ಲದೆ, ಈ ಬಗ್ಗೆ ಪರಿಶೀಲನೆ ನಡೆಸಲು ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಬೇಕು ಎಂದೂ ಸಚಿವ ಖಾದರ್ ಮುಖ್ಯಮಂತ್ರಿಗೆ ಮನವಿ ಮಾಡಿದರು.

ಸಚಿವ ಖಾದರ್‌ರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಈ ಬಗ್ಗೆ ಸೂಕ್ತ ಕ್ರಮಕ್ಕೆ ಮುಂದಾಗಲು ಸರಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News