ಅಜಕುರಿ : ಅಕ್ರಮ ಮರಳು ಅಡ್ಡೆಗೆ ದಾಳಿ; ಮರಳು ವಶ

Update: 2018-09-21 15:44 GMT

ಬೆಳ್ತಂಗಡಿ,ಸೆ.21: ಧರ್ಮಸ್ಥಳ ಸಮೀಪ ಅಜಕುರಿ ಎಂಬಲ್ಲಿ ನೇತ್ರಾವತಿ ನದಿಯಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆಗೆ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ತಂಡ ಶುಕ್ರವಾರ ದಾಳಿ ನಡೆಸಿದ್ದು ಭಾರೀ ಪ್ರಮಾಣದ ಮರಳು ಹಾಗೂ ಗಣಿಗಾರಿಕೆಗೆ ಉಪಯೋಗಿಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. 

ನದಿಯಿಂದ ತೆಪ್ಪ ಉಪಯೋಗಿಸಿ ಮರಳು ತೆಗೆಯುತ್ತಿದ್ದ ಈ ತಂಡ ಇಲ್ಲಿ ಭಾರೀ ಪ್ರಮಾಣದಲ್ಲಿ ಮರಳನ್ನು ಶೇಖರಿಸಿಟ್ಟಿದ್ದರು. ಮರಳು ತೆಗೆಯಲು ಉಪಯೋಗಿಸಿದ್ದ ಮೂರು ಬೋಟ್‍ಗಳು, ಒಂದು ತೆಪ್ಪ, ಸುಮಾರು 15 ಲೋಡಿಗೂ ಹೆಚ್ಚು ಮರಳನ್ನು ವಶಪಡಿಸಿಕೊಂಡಿದ್ದಾರೆ. ಭಾರೀ ಪ್ರಮಾಣದಲ್ಲಿ ನಡೆಯುತ್ತಿದ್ದ ಮರಳು ಗಾರಿಕೆಯ ಬಗ್ಗೆ ಮಾಹಿತಿ ಪಡೆದ ಬೆಳ್ತಂಗಡಿ ತಹಶೀಲ್ದಾರ್ ಹಾಗೂ ತಂಡ ಧಾಳಿ ನಡೆಸಿದ್ದು ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಧರ್ಮಸ್ಥಳ ಠಾಣೆಗೆ ವಶಪಡಿಸಿದ ವಸ್ತುಗಳನ್ನು ಒಪ್ಪಿಸಲಾಗಿದ್ದು ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ತಹಶೀಲ್ದಾರರೊಂದಿಗೆ ಕಂದಾಯ ನಿರೀಕ್ಷಕ ರವಿ ಹಾಗೂ ಇತರರು ಭಾಗವಹಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News