ಚೆನ್ನೈ: ಇಂಡಿಗೋ ಏರ್‌ಲೈನ್ಸ್ ಬಸ್‌ಗೆ ಬೆಂಕಿ

Update: 2018-09-21 16:22 GMT

ಚೆನ್ನೈ, ಸೆ. 21: ವಿಮಾನಕ್ಕೆ ಹತ್ತಿಸಲು ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಇಂಡಿಗೋ ಏರ್‌ಲೈನ್ಸ್‌ಗೆ ಸೇರಿದ ಬಸ್‌ಗೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ಗುರುವಾರ ಬೆಂಕಿ ಹತ್ತಿಕೊಂಡಿತು ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿ ಶಾಮಕ ದಳದ ಸಿಬ್ಬಂದಿ ಹಾಗೂ ರಕ್ಷಣಾ ಸೇವಾ ಸಿಬ್ಬಂದಿ ಕೂಡಲೇ ಬೆಂಕಿ ನಂದಿಸಿದ ಕಾರಣಕ್ಕೆ ಯಾರಿಗೂ ಗಾಯಗಳಾಗಿಲ್ಲ.

50 ಪ್ರಯಾಣಿಕರಿದ್ದ ಬಸ್ ಆಗಮನ ಸ್ಥಳಕ್ಕೆ ಸಮೀಪಿಸುತ್ತಿದ್ದಂತೆ ಬೆಂಕಿ ಹತ್ತಿಕೊಂಡಿತು. ಕೂಡಲೇ ಬೆಂಕಿ ಆರಿಸಲಾಯಿತು. ಬಸ್‌ನ ಒಳಗೆ ಅಥವಾ ಹೊರಗೆ ಯಾವುದೇ ಹಾನಿ ಆಗಿಲ್ಲ ಎಂದು ಪ್ರಾಥಮಿಕ ಅಂದಾಜು ತಿಳಿಸಿದೆ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News