ಮಂಗಳೂರು ಧರ್ಮಪ್ರಾಂತ್ಯಕ್ಕೆ ನೂತನ ಶ್ರೇಷ್ಠ ಗುರುಗಳ ನೇಮಕ

Update: 2018-09-21 16:59 GMT

ಮಂಗಳೂರು,ಸೆ.21: ಮಂಗಳೂರು ಧರ್ಮಪ್ರಾಂತ್ಯದ ನೂತನ ಬಿಷಪ್ ಡಾ. ಪೀಟರ್ ಪೌವ್ಲ್ ಸಲ್ದಾನಾ ಅವರು ಅ.ವಂ. ಮ್ಯಾಕ್ಸಿಂ ನೊರೊನ್ಹಾ ಅವರನ್ನು ನೂತನ ಶ್ರೇಷ್ಠ ಗುರುಗಳಾಗಿ ಶುಕ್ರವಾರ ನೇಮಕಗೊಳಿಸಿದ್ದಾರೆ. ಸೆ.26ರಂದು ಇವರು ತನ್ನ ಜವಾಬ್ದಾರಿ ನಿರ್ವಹಿಸಲಿದ್ದಾರೆ.

ಪಾಂಬೂರಿನ ಅಲ್ಬರ್ಟ್ ನೊರೊನ್ಹಾ ಮತ್ತು ಫ್ಲೋರಿನ್ ನೊರೊಹ್ನಾ ಅವರ ಪುತ್ರನಾದ ಅ.ವಂ. ಮ್ಯಾಕ್ಸಿಂ ನೊರೊನ್ಹಾ ಅವರು 1981ರಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಗುರುಗಳಾಗಿ ದೀಕ್ಷೆ ಪಡೆದರು. ಬೀದರ್ ಜಿಲ್ಲೆಯ ಬಾಲ್ಕಿ ಮತ್ತು ಜಲಸಂಗಿ ಕೇಂದ್ರಗಳಲ್ಲಿ ಹಾಗೂ ಬೆಂದೂರು ಮತ್ತು ಶಂಕರಪುರ ಧರ್ಮ ಕೇಂದ್ರಗಳಲ್ಲಿ ಸಹಾಯಕ ಗುರುಗಳಾಗಿ ಸೇವೆ ಸಲ್ಲಿಸಿದ್ದರು. ವಿಚಾರಣಾ ಗುರುಗಳಾಗಿ ಪಿಯುಸ್ ನಗರ ಮತ್ತು ಫೆರಾರ್ ಧರ್ಮಕೇಂದ್ರಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರು.

2008ನೆ ಸಾಲಿನಿಂದ ಮಂಗಳೂರು ಧರ್ಮಪ್ರಾಂತ್ಯದ ಹಣಕಾಸು ವಿಭಾಗದ ಮೇಲ್ವಿಚಾರಕಾಗಿ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಬಂಟ್ವಾಳ ಮೊಡಂಕಾಪು ಧರ್ಮಕೇಂದ್ರದ ವಿಚಾರಣಾ ಗುರುಗಳಾಗಿ ಹಾಗೂ ಬಂಟ್ವಾಳ ವಲಯದ ಮುಖ್ಯಗುರುಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News