ಹೆಜಮಾಡಿ ಕಾಲೇಜಿನಲ್ಲಿ ವೈದ್ಯಕೀಯ ತಪಾಸಣಾ ಶಿಬಿರ

Update: 2018-09-21 17:24 GMT

ಪಡುಬಿದ್ರೆ, ಸೆ.21: ಉಡುಪಿ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯು ರ್ವೇದ ಕಾಲೇಜು ಮತ್ತು ಆಸ್ತತ್ರೆಯ ಮಹಿಳಾ ವೈದ್ಯೆಯರ ಘಟಕ ಗಾರ್ಗಿ ವತಿಯಿಂದ ವೈದ್ಯಕೀಯ ತಪಾಸಣಾ ಶಿಬಿರ ಮತ್ತು ಮಾಹಿತಿ ಉಪನ್ಯಾಸ ಮಾಲಿಕೆಯನ್ನು ಹೆಜಮಾಡಿ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ಆಯೋಜಿಸಲಾಗಿತ್ತು.

ಶಿಬಿರವನ್ನು ಗಾರ್ಗಿ ಮೇಲ್ವಿಚಾರಕಿ ಡಾ.ಸುಮಾ ವಿ.ಮಲ್ಯ ಉದ್ಘಾಟಿಸಿದರು. ಸುಮಾರು 250 ವಿದ್ಯಾರ್ಥಿಗಳ ಆರೋಗ್ಯ ತಪಾಸಣೆ ನಡೆಸಿ ಉಚಿತ ಔಷಧಿ ಯನ್ನು ವಿತರಿಸಲಾಯಿತು. ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಸಹ ಪ್ರಾಧ್ಯಾಪಕಿ ಡಾ.ಸುಚೇತ ಕುಮಾರಿ, ಅಗದತಂತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಅಮಲ ಜ್ಯೋತಿ, ಕೌಮಾರೃತ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ನಾಗರತ್ನ, ಸಂಹಿತ ಸಿದ್ಧಾಂತ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಲಿಖಿತಾ, ಸ್ವಸ್ಥವೃತ್ತ ವಿಭಾಗದ ಸಹಪ್ರಾಧ್ಯಾಪಕಿ ಡಾ.ಯೋಗೀಶ ಆಚಾರ್ಯ ಆರೋಗ್ಯ ಮಾಹಿತಿ ನೀಡಿದರು.

ಪ್ರಸೂತಿತಂತ್ರ ಮತ್ತು ಸ್ತ್ರೀರೋಗ ವಿಭಾಗದ ಸಹಪ್ರಾಧ್ಯಾಪಕಿ ಡಾ.ವಿದ್ಯಾ ಬಲ್ಲಾಳ್, ಶರೀರ ರಚನಾ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ರಶ್ಮಿ ಎನ್. ಆರ್., ದ್ರವ್ಯಗುಣ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ.ಸುಮಾ ವಿ.ಮಲ್ಯ, ಶಿಬಿರದಲ್ಲಿ ಪಾಲ್ಗೊಂಡಿದ್ದರು. ಹಿರಿಯ ಶಿಕ್ಷಕ ವಿನ್ಸೆಂಟ್ ಡಿಸೋಜ, ಪ್ರಭಾರ ಮುಖ್ಯಶಿಕ್ಷಕಿ ಸವಿತಾ ಆರ್.ನಾಯಕ್, ಸಹ ಶಿಕ್ಷಕಿ ದೀಪಾ ಉಡುಪ, ದೈಹಿಕ ಶಿಕ್ಷಕ ಅಲ್ವಿನ್ ಅಂದ್ರಾದೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News