×
Ad

ಗಾಂಜಾ ಸೇವನೆ: ನಾಲ್ವರು ವಿದ್ಯಾರ್ಥಿಗಳು ವಶಕ್ಕೆ

Update: 2018-09-21 23:31 IST

ಮಣಿಪಾಲ, ಸೆ.21: ಗಾಂಜಾ ಸೇವಿಸಿದ್ದ ಮಣಿಪಾಲದ ನಾಲ್ವರು ವಿದ್ಯಾರ್ಥಿಗಳನ್ನು ಮಣಿಪಾಲ ಪೊಲೀಸರು ಸೆ.19ರಂದು ಸಂಜೆ ವೇಳೆ ಹೆರ್ಗಾ ಗ್ರಾಮದ ಸರಳಬೆಟ್ಟು ಸಮೀಪ ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿದ್ಯಾರ್ಥಿಗಳಾದ ರಿಷಿವೀರ್(20), ಪ್ರೀತಂ ಗುಪ್ತ(19), ಜಿ.ಪ್ರತೀಕಣ (20) ಹಾಗೂ ಸಾಯಿ ಚರಣ್(20) ಎಂಬವರನ್ನು ವಶಕ್ಕೆ ಪಡೆದ ಪೊಲೀಸರು ಮಣಿಪಾಲ ಕೆಎಂಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ಮುಂದೆ ಹಾಜರು ಪಡಿಸಿದರು. ಇವರನ್ನು ಪರೀಕ್ಷಿಸಿದ ವೈದ್ಯರು ಈ ನಾಲ್ವರು ಕೂಡ ಗಾಂಜಾ ಸೇವಿಸಿರುವುದಾಗಿ ದೃಢ ಪತ್ರ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News