ನಾಳೆ ಸಹಕಾರದ ಸಾಹಿತ್ಯಕ- ಕಲಾ ಕಾರ್ಯಕ್ರಮ
Update: 2018-09-21 23:33 IST
ಉಡುಪಿ, ಸೆ.21: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆಯ ಅಂಗವಾಗಿ ಸಾಂಸ್ಕೃತಿಕ ಸ್ಪಂದನ- ಸಹಕಾರದ ಸಾಹಿತ್ಯಕ- ಕಲಾ ಕಾರ್ಯಕ್ರಮವು ಸೆ.23ರಂದು ಸಂಜೆ 4 ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನರವೀಂದ್ರ ಮಂಟಪದಲ್ಲಿ ಜರಗಲಿದೆ.
ಹಿರಿಯ ಚಿಂತಕ ಗೋಪಾಲ ಬಿ.ಶೆಟ್ಟಿ ಅವರ ದೇವಯಾನಿ-ಶರ್ಮಿಷ್ಠೆ ಕಾವ್ಯ ನಾಟಕದ ಎರಡನೆಯ ಪರಿಷ್ಕೃತ ಆವೃತ್ತಿಯನ್ನು ನ್ಯಾಯವಾದಿ ಶಾಂತಾರಾಮ್ ಶೆಟ್ಟಿ ಬಿಡುಗಡೆ ಮಾಡಲಿರುವರು. ನಂತರದಲ್ಲಿ ಸಮೂಹ ಕಲಾವಿದರಿಂದ ರಂಗ ಗಾಯನ ಹಾಗೂ ಕಾವ್ಯ ನಾಟಕದ ಪ್ರಯೋಗ ನಡೆಯಲಿದೆ ಎಂದು ಸೊಸೈಟಿಯ ಪ್ರಧಾನ ವ್ಯವಸ್ಥಾಪಕ ಜಯಕರ ಶೆಟ್ಟಿ ಇಂದ್ರಾಳಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.