×
Ad

ಅಪ್ರಾಪ್ತೆಗೆ ಲೈಂಗಿಕ ಹಿಂಸೆ: ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡಲು ಎಸ್ಕೆಎಸೆಸ್ಸೆಫ್ ಆಗ್ರಹ

Update: 2018-09-21 23:45 IST

ಮಂಗಳೂರು, ಸೆ.21:ಬಂಟ್ವಾಳ ತಾಲೂಕಿನ ಗೂಡಿನಬಳಿ ಎಂಬಲ್ಲಿ ಅಪ್ರಾಪ್ತೆಗೆ ಲೈಂಗಿಕ ಹಿಂಸೆ ನೀಡಿದ ಪ್ರಕರಣವು ಅಮಾನುಷ ಮತ್ತು ಅಮಾನವೀಯವಾಗಿದೆ. ಕೃತ್ಯವನ್ನು ಎಸಗಿರುವ ಬಂಧಿತ ಆರೋಪಿಗಳ ವಿರುದ್ಧ ಸೂಕ್ತ ಕ್ರಮಕೈಗೂಳ್ಳಬೇಕು ದ.ಕ.ಜಿಲ್ಲಾ ಎಸ್ಕೆಎಸೆಸ್ಸೆಫ್ ಆಗ್ರಹಿಸಿದೆ.

ಎಳೆಯ ಮಕ್ಕಳ ಮೇಲೆ ಅವ್ಯಾಹತವಾಗಿ ನಡೆಯುವ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳವನ್ನು ಮಟ್ಟ ಹಾಕಲು ಕಾನೂನು ಕ್ರಮವನ್ನು ಬಿಗಿಗೊಳಿಸಬೇಕು. ಅಲ್ಲದೆ ಕಾಲೇಜು ಹಾಸ್ಟೆಲ್‌ಗಳಲ್ಲಿ ವರದಿಯಾಗುವ ಆತ್ಮಹತ್ಯಾ ಪ್ರಕರಣ ಮತ್ತು ಲೈಂಗಿಕ ಕಿರುಕುಳವನ್ನು ತಡೆಯಲು ಸಂಬಂಧಿಸಿದ ಇಲಾಖೆ ಮತ್ತು ಅಧಿಕಾರಿಗಳು ಸೂಕ್ತವಾಗಿ ಕ್ರಮ ಜರುಗಿಸಬೇಕೆಂದು ಎಸ್ಕೆಎಸೆಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಯಮಾನಿ ತಿಂಗಳಾಡಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News