×
Ad

ಮಂಗಳೂರು : ಮಟ್ಕಾ ದಂಧೆ ನಿರತ ಆರೋಪಿ ಸೆರೆ

Update: 2018-09-21 23:53 IST

ಮಂಗಳೂರು, ಸೆ.21: ನಗರದ ಉರ್ವಾ ಮೈದಾನದ ಬಳಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಯುವಕನನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಶಕ್ತಿನಗರ ಸಮೀಪದ ಪ್ರೀತಿನಗರ ನಿವಾಸಿ ಸುಜಿತ್ ಪೂಜಾರಿ (31) ಬಂಧಿತ ಆರೋಪಿಯಾಗಿದ್ದಾನೆ.

ಸೆ.19ರಂದು ಉರ್ವಾ ಆರ್‌ಆರ್‌ಪೈ ಮೆಮೊರಿಯಲ್ ಮೈದಾನದ ಪರಿಸರದಲ್ಲಿ ಅಕ್ರಮವಾಗಿ ಮಟ್ಕಾ ದಂಧೆ ನಡೆಸುತ್ತಿದ್ದ ಬಗ್ಗೆ ಮಾಹಿತಿ ಪಡೆದ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿದ್ದರು.ಆರೋಪಿಯಿಂದ ಮಟ್ಕಾಕ್ಕೆ ಬಳಸಿದ 17,630 ರೂ., ಮಟ್ಕಾ ನಂಬರ್ ಬರೆದ ಚೀಟಿಗಳು, ಮೊಬೈಲ್, ದ್ವಿಚಕ್ರ ವಾಹನ ಸಹಿತ 67,630ರೂ. ಮೌಲ್ಯದ ಸೊತ್ತು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಇನ್‌ಸ್ಪೆಕ್ಟರ್ ಶಾಂತಾರಾಮ್, ಎಸ್ಸೈಗಳಾದ ಶ್ಯಾಮ್ ಸುಂದರ್, ಬರ್ಕೆ ಇನ್‌ಸ್ಪೆಕ್ಟರ್ ರಾಮಕೃಷ್ಣ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News