ಗುಣಮಟ್ಟದ ಶಿಕ್ಷಣಕ್ಕಾಗಿ ಮೌಲ್ಯಂಕನ ಅತ್ಯಗತ್ಯ: ಡಾ.ಸುಧೀರ್

Update: 2018-09-22 14:25 GMT

ಉಡುಪಿ, ಸೆ.22: ಇಂದು ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವು ದೊರೆತು ಅವರ ಸರ್ವಾಂಗಿಣ ಪ್ರಗತಿಗೆ ದಾರಿಯಾಗಲು ಕಾಲೇಜು ಗಳ ಮೌಲ್ಯಂಕನವು ತೀರಾ ಅತ್ಯಗತ್ಯವಾಗಿದೆ ಎಂದು ಕೇರಳ ವಿಶ್ವವಿದ್ಯಾಲಯ ಅನುದಾನ ಆಯೋಗದ ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದ ನಿರ್ದೇಶಕ ಡಾ.ಎಸ್.ವಿ.ಸುಧೀರ್ ಹೇಳಿದ್ದಾರೆ.

ನ್ಯಾಕ್ ಮೌಲ್ಯಾಂಕನಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ತಂದಿರುವ ಬದಲಾ ವಣೆಗಳ ಕುರಿತ ಸಮಗ್ರ ಮಾಹಿತಿ ನೀಡುವ ನಿಟ್ಟಿನಲ್ಲಿ ಇತ್ತೀಚೆಗೆ ಉಡುಪಿ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಆಯೋಜಿಸಲಾದ ರಾಜ್ಯಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಹೊಸದಾಗಿ ಬಂದಿರುವ ನ್ಯಾಕ್ ಮೌಲ್ಯಾಂಕನದ ಪರಿಷ್ಕೃತ ವಿಧಾನದಿಂದ ಕಾಲೇಜುಗಳ ಗುಣಮಟ್ಟವನ್ನು ವಸ್ತುನಿಷ್ಟ ಮಾನದಂಡದ ಮೂಲಕ ಅಳೆಯ ಲಾಗುತ್ತದೆ. ಈ ಮಾನದಂಡಗಳಿಂದಾಗಿ ಇಡೀ ಪಕ್ರಿಯೆಯಲ್ಲಿ ಪಾರದರ್ಶಕತೆ ಕಂಡುಬರುತ್ತದೆ. ಇದು ಕಾಲೇಜುಗಳ ಸದ್ಯದ ಪರಿಸ್ಥಿತಿಯ ಬಗ್ಗೆ ಬೆಳಕು ಚೆಲ್ಲುವುದಲ್ಲದೆ ಮುಂದೆ ಗುಣಾತ್ಮಕ ಶಿಕ್ಷಣ ನೀಡಲು ಅನುಸರಿಸಬೇಕಾದ ಮಾರ್ಗೋಪಾಯಗಳ ಬಗ್ಗೆಯೂ ದಾರಿ ತೋರಿಸುತ್ತದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಜಿ.ವಿಜಯ ಮಾತನಾಡಿ, ಸ್ವಾತಂತ್ರ ನಂತರ ಈ ದೇಶದಲ್ಲಿ ಶಿಕ್ಷಣ ರಂಗ ದಲ್ಲಿ ಮಹತ್ತರ ಪ್ರಗತಿಯನ್ನು ಕಾಣುತ್ತಿದೆ. ಗುಣಾತ್ಮಕ ಶಿಕ್ಷಣವನ್ನು ಖಾತ್ರಿಗೊಳಿಸ ಲೆಂದೇ ಅಸ್ತಿತ್ವಕ್ಕೆ ಬಂದ ನ್ಯಾಕ್ ಮೌಲ್ಯಾಂಕನ ಪದ್ದತಿಯಿಂದಾಗಿ ಕಾಲೇಜು ಗಳಲ್ಲಿ ಇಂದು ಹೊಸ ಜಾಗೃತಿ ಮೂಡುತ್ತಿದೆ. ಇದರಿಂದ ಕಾಲೇಜುಗಳ ಮೂಲ ಭೂತ ಸೌಲಭ್ಯಗಳಲ್ಲಿ ಹಾಗೂ ಶಿಕ್ಷಣದ ಗುಣಮಟ್ಟದಲ್ಲಿ ಮಹತ್ತರ ಸುಧಾರಣೆ ಆಗಿದೆ ಎಂದು ಅಭಿಪ್ರಾಯ ಪಟ್ಟರು.

ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ರಕಾಶ ಕಣಿವೆ ಸ್ವಾಗತಿಸಿದರು. ಪ್ರಾಧ್ಯಾಪಕ ಬಿ.ಜಿ.ಶಂಕರಮೂರ್ತಿ ವಂದಿಸಿದರು. ವಿದ್ಯಾರ್ಥಿನಿ ಐಶ್ವರ್ಯ ಜೇಮ್ಸ್ ಕಾರ್ಯಕ್ರಮ ನಿರೂಪಿಸಿದರು. ನಂತರ ಡಾ.ಎಸ್.ವಿ.ಸುಧೀರ್ ಹಾಗೂ ಪುತ್ತೂರು ವಿವೇಕಾನಂದ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಮಾಧವ ಭಟ್ ಕಾರ್ಯಗಾರ ನಡೆಸಿಕೊಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News