ಹೆದ್ದಾರಿ ಭೂಸ್ವಾಧೀ: ಪರಿಹಾರ ಕೋರಿಕೆಗೆ ಅರ್ಜಿ ಆಹ್ವಾನ

Update: 2018-09-22 14:28 GMT

ಉಡುಪಿ, ಸೆ.22: ಜಿಲ್ಲೆಯ ಕುಂದಾಪುರ ತಾಲೂಕು ಕಸಬಾ ಗ್ರಾಮದ ಕಿ.ಮೀ. 348-500 ರಿಂದ ಉಡುಪಿ ಜಿಲ್ಲೆಯ ಕಾಪು ತಾಲೂಕು ಹೆಜಮಾಡಿ ಗ್ರಾಮದ ಕಿ.ಮೀ.283-300ರವರೆಗಿನ ರಾಷ್ಟ್ರೀಯ ಹೆದ್ದಾರಿ 66(17)ರ ಅಗಲೀಕರಣಕ್ಕಾಗಿ ಭೂಸ್ವಾಧೀನತೆಗೆ ಒಳಪಡಿಸಲಾದ ಜಮೀನುಗಳ ಕೆಲವು ಭೂಮಾಲಕರು ಈವರೆಗೂ ಪರಿಹಾರ ಪಡೆಯಲು ಎವಾರ್ಡು ನೋಟೀಸ್ ಜಾರಿಗೊಂಡಿದ್ದರೂ, ದಾಖಲೆಗಳೊಂದಿಗೆ ಪರಿಹಾರ ಕೋರಿಕೆ ಸಲ್ಲಿಸದೇ ಇರುವುದು ಜಿಲ್ಲಾಡಳಿತದ ಗಮನಕ್ಕೆ ಬಂದಿದೆ.

ಭೂಸ್ವಾಧೀನ ಪ್ರಕ್ರಿಯೆ ಈಗಾಗಲೇ ಮುಕ್ತಾಯ ಹಂತದಲ್ಲಿರುವುದರಿಂದ ಈವರೆಗೆ ಪರಿಹಾರ ಕೋರಿಕೆ ಅರ್ಜಿ ಸಲ್ಲಿಸದೇ ಇರುವ ಭೂಮಾಲಕರು ಹಾಗೂ ಸಂತ್ರಸ್ತರು ತಮ್ಮ ಜಮೀನಿನ ಹಕ್ಕು ಸಾಬೀತುಪಡಿಸಲು ಅಗತ್ಯ ದಾಖಲೆಗಳೊಂದಿಗೆ ಈ ಪ್ರಕಟಣೆಯ 30 ದಿವಸಗಳೊಳಗೆ ಸಕ್ಷಮ ಪ್ರಾಧಿಕಾರಿ, ರಾಷ್ಟ್ರೀಯ ಹೆದ್ದಾರಿ 66(17) ಹಾಗೂ ಸಹಾಯಕ ಕಮೀಷನರ್ ಕುಂದಾಪುರ ಇವರ ಕಚೇರಿಯಲ್ಲಿ ಕೋರಿಕೆ ಸಲ್ಲಿಸುವಂತೆ ಸಕ್ಷಮ ಪ್ರಾಧಿಕಾರಿಗಳು ರಾ.ಹೆ.66 (17) ಹಾಗೂ ಕುಂದಾಪುರ ಸಹಾಯಕ ಕಮೀಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News