ವಿಶ್ವ ಅಗ್ನಿಶಾಮಕ ದಳ ಕ್ರೀಡಾಕೂಟದಲ್ಲಿ ಪದಕ ಸಾಧನೆ
Update: 2018-09-22 20:04 IST
ಉಡುಪಿ, ಸೆ.22: ಉಡುಪಿ ಅಗ್ನಿಶಾಮಕ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸು ತ್ತಿರುವ ಅಶ್ವಿನ್ ಸನಿಲ್ ಇವರು ಸೆ.8ರಿಂದ 18 ರವರೆಗೆ ದಕ್ಷಿಣ ಕೊರಿಯಾದ ಚುಂಗ್ಜುನಲ್ಲಿ ನಡೆದ 13ನೇ ವಿಶ್ವ ಅಗ್ನಿಶಾಮಕ ದಳದ ಕ್ರೀಡಾ ಕೂಟದಲ್ಲಿ ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ಇಲಾಖೆಯ ವತಿಯಿಂದ ಭಾರತವನ್ನು ಪ್ರತಿನಿಧಿಸಿ 100 ಮೀ. ರಿಲೇಯಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.
ಅದೇ ರೀತಿ ಪವರ್‌ಲಿಪ್ಟಿಂಗ್ ಹಾಗೂ ಬೆಂಚ್‌ಪ್ರೆಸ್‌ನಲ್ಲಿ ಉತ್ತರ ಕನ್ನಡ ಜಿಲ್ಲೆಯ ರಾಜೇಶ ಕೇಶವ ಮಡಿವಾಳ ಇವರು ಎರಡು ಕಂಚಿನ ಪದಕಗಳನ್ನು ಜಯಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಅಶ್ವಿನ್ ಸನಿಲ್ ಅವರಿಗೆ ಕ್ರೀಡಾಕೂಟದಲ್ಲಿ ಭಾಗವಹಿಸಲು ಶ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ.ಶಂಕರ್, ಟ್ರಸ್ಟ್ ವತಿಯಿಂದ ಧನ ಸಹಾಯ ಮಾಡಿ ಪ್ರೋತ್ಸಾಹಿಸಿದ್ದಾರೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.