ಸಿರಿಯ ನಿರಾಶ್ರಿತರ ದೋಣಿ ಮುಳುಗಿ ಮಗು ಸಾವು

Update: 2018-09-22 14:48 GMT

ಬೈರೂತ್, ಸೆ. 22: ಸುಮಾರು 36 ಸಿರಿಯನ್ ನಿರಾಶ್ರಿತರನ್ನು ಹೊತ್ತ ದೋಣಿಯೊಂದು ಶನಿವಾರ ಲೆಬನಾನ್ ಕರಾವಳಿಯಲ್ಲಿ ಮುಳುಗಿದ್ದು, ಹೆಚ್ಚಿನವರನ್ನು ಲೆಬನಾನ್ ಸೇನೆ ರಕ್ಷಿಸಿದೆ.

ಆದಾಗ್ಯೂ, ಒಂದು ಮಗು ಮುಳುಗಿ ಮೃತಪಟ್ಟಿದೆ. ದೋಣಿಯು 180 ಕಿಲೋಮೀಟರ್ ದೂರದಲ್ಲಿರುವ ಸೈಪ್ರಸ್‌ಗೆ ನಿರಾಶ್ರಿತರನ್ನು ಅಕ್ರಮವಾಗಿ ಸಾಗಿಸುತ್ತಿತ್ತು ಎಂದು ಮೂಲಗಳು ಹೇಳಿವೆ. ಅದು ಉತ್ತರ ಲೆಬನಾನ್‌ನ ಕರಾವಳಿಯಲ್ಲಿ ಸಮತೋಲನವನ್ನು ಕಳೆದುಕೊಂಡಿತು. ದೋಣಿಯಲ್ಲಿದ್ದ ಮೂವರು ಗಂಬೀರವಾಗಿ ಅಸ್ವಸ್ಥಗೊಂಡಿದ್ದಾರೆ.

ಸಿರಿಯ ಆಂತರಿಕ ಯುದ್ಧದಿಂದ ನಿರ್ವಸಿತರಾದ ಸುಮಾರು 10 ಲಕ್ಷ ನೋಂದಾಯಿತ ನಿರಾಶ್ರಿತರು ಲೆಬನಾನ್‌ನಲ್ಲಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತ ಸಂಸ್ಥೆ ಯುಎನ್‌ಎಚ್‌ಸಿಆರ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News