ಸಿಪಿಐ ಬೆಂಬಲ: ಎಣ್ಮಕಜೆ ಗ್ರಾ.ಪಂ. ಆಡಳಿತ ಯುಡಿಎಫ್ ತೆಕ್ಕೆಗೆ

Update: 2018-09-22 14:54 GMT

ಪೆರ್ಲ, ಸೆ. 22: ಎಣ್ಮಕಜೆ ಗ್ರಾ.ಪಂ.ನಲ್ಲಿ  ಶನಿವಾರ ನಡೆದ ಅಧ್ಯಕ್ಷರ ಹಾಗೂ ಉಪಾಧ್ಯಕ್ಷರ ಚುನಾವಣೆಯಲ್ಲಿ ಸಿಪಿಐ, ಯುಡಿಎಫ್ ಗೆ  ಬೆಂಬಲ ನೀಡಿದ್ದು ಯುಡಿಎಫ್ ಅಭ್ಯರ್ಥಿ ಕಾಂಗ್ರೆಸ್ ಪಕ್ಷದ ಶಾರದ ವೈ. ಪಂ. ಅಧ್ಯಕ್ಷರಾಗಿ, ಉಪಾಧ್ಯಕ್ಷ ಸ್ಥಾನಕ್ಕೆ ಯುಡಿಎಫ್ ನಿಂದ ಸ್ಪರ್ಧಿಸಿದ ಮುಸ್ಲಿಂಲೀಗ್ ಸದಸ್ಯ  ಅಬೂಬಕ್ಕರ್ ಸಿದ್ದಿಕ್ ಖಂಡಿಗೆ ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ಈ ಮೊದಲಿನ ಅಧ್ಯಕ್ಷೆ ರೂಪವಾಣಿ ಆರ್.ಭಟ್ ಅಧ್ಯಕ್ಷ ಸ್ಥಾನಕ್ಕೆ ಹಾಗೂ ಉಪಾಧ್ಯಕ್ಷರಾಗಿದ್ದ ಪುಟ್ಟಪ್ಪ ಖಂಡಿಗೆ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು.

ನಿರ್ಣಾಯಕ ಪಾತ್ರ ವಹಿಸಿದ ಸಿಪಿಐ

ಎಣ್ಮಕಜೆ ಗ್ರಾ.ಪಂ.ನಲ್ಲಿ  ಬಿಜೆಪಿ 7, ಕಾಂಗ್ರೆಸ್ 4, ಮುಸ್ಲಿಂಲೀಗ್ 3 ಸೇರಿದಂತೆ ಯುಡಿಎಫ್ 7, ಸಿಪಿಎಂ ಎರಡು, ಸಿಪಿಐ ಒಂದು  ಸದಸ್ಯರನ್ನು ಹೊಂದಿದ್ದು ಪಂಚಾಯಿತಿ ಆಡಳಿತದ ಚುಕ್ಕಾಣಿ ಹಿಡಿಯಲು 8 ಸದಸ್ಯರ ಬೆಂಬಲ ಬೇಕಾಗಿತ್ತು. ಬಿಜೆಪಿ ಆಡಳಿತದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡನೆ ಪರವಾಗಿ ಎಲ್ ಡಿ ಎಫ್ ಮತ ಚಲಾಯಿಸಿದ್ದರೂ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆಯಲ್ಲಿ ಸಿಪಿಎಂ ತಟಸ್ಥ ನಿಲುವು ಕೈಗೊಳ್ಳುವುದರೊಂದಿಗೆ ಎಲ್ ಡಿ ಎಫ್ ಘಟಕ ಪಕ್ಷವಾದ  ಸಿಪಿಐ ಯುಡಿಎಫ್ ಪರ ಮತ ಚಲಾಯಿಸಿದುದು ಯುಡಿಎಫ್ ಪಂಚಾಯಿತಿ ಆಡಳಿತ ಗಳಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News