ಕರ್ನಾಟಕ ರಾಜ್ಯ ಶಿಕ್ಷಕರ ವಿಕಾಸ ಪರಿಷತ್ತು: ರಾಜ್ಯಮಟ್ಟ ಪ್ರಶಸ್ತಿಗೆ ನಾಲ್ವರು ಶಿಕ್ಷಕರ ಆಯ್ಕೆ
Update: 2018-09-22 20:47 IST
ಉಡುಪಿ, ಸೆ. 22: ಬೆಂಗಳೂರಿನ ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಸೆ.23ರಂದು ಬೆಂಗಳೂರಿ ನಲ್ಲಿ ಆಯೋಜಿಸಿರುವ ಶಿಕ್ಷಕರ ಸಮ್ಮೇಳನ ಮತ್ತು ಶಿಕ್ಷಕರ ದಿನಾಚರಣೆಯ ಸಂದಭರ್ದಲ್ಲಿ ನೀಲಾವರ ಸುರೇಂದ್ರ ಅಡಿಗ ಸಹಿತ ಕರಾವಳಿಯ ನಾಲ್ವರು ಶಿಕ್ಷಕರನ್ನು ರಾಜ್ಯಮಟ್ಟದ ಪ್ರಶಸ್ತಿ ನೀಡಿ ಸನ್ಮಾನಿಸಲಿದೆ ಎಂದು ಪರಿಷತ್ತಿನ ಪ್ರಕಟಣೆ ತಿಳಿಸಿದೆ.
ತೆಕ್ಕಟ್ಟೆಯ ಕುವೆಂಪು ಶತಮಾನೋತ್ಸವ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ನೀಲಾವರ ಸುರೇಂದ್ರ ಅಡಿಗ, ಅತ್ತೂರು ಸಂತ ಲಾರೆನ್ಸ್ ಅನುದಾನಿತ ಪ್ರೌಢಶಾಲೆಯ ಸುಬ್ರಹ್ಮಣ್ಯ ಉಪಾಧ್ಯ ಬಿ, ಹೆಬ್ರಿ ಎಸ್. ಆರ್. ಪದವಿ ಪೂರ್ವ ಕಾಲೇಜಿನ ದೀಪಕ್ ಎನ್. ಹಾಗೂ ಬೆಳ್ತಂಗಡಿ ತಾಲೂಕಿನ ಕೆಮ್ಮಟೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ವಸಂತಿ ಟಿ.ನಿಡ್ಲೆ ಈ ನಾಳೆ ಸನ್ಮಾನಗೊಳ್ಳುವ ಶಿಕ್ಷಕರಾಗಿದ್ದಾರೆ.