ಮಲ್ಲಾರ್: ಮಹಿಳೆ ನಾಪತ್ತೆ

Update: 2018-09-22 15:23 GMT

ಕಾಪು, ಸೆ. 22: ಮಲ್ಲಾರ್ ಗ್ರಾಮದ ಸಜ್ಜಾದ್ ಹುಸೈನ್ ಎಂಬವರ ಮಗಳು ಪಿರ್ದೋಸ್ (28) ಎಂಬವರು ಸೆ.19ರಂದು ಮಧ್ಯಾಹ್ನ ವೇಳೆ ನಾಪತ್ತೆಯಾಗಿ ರುವ ಬಗ್ಗೆ ವರದಿಯಾಗಿದೆ.

ಇವರು ತನ್ನ ಗಂಡ ಮೊಹಮ್ಮದ್ ಸಮೀರ್ ಹಾಗೂ ಮಗು ಸಿಮ್ರಾ ಫಾತಿಮಾರೊಂದಿಗೆ ಸೆ.13ರಂದು ಬೆಂಗಳೂರಿಗೆ ಹೋಗಿದ್ದು, ಪಿರ್ದೋಸ್ ಸೆ.18ರಂದು ಮಗುವಿನೊಂದಿಗೆ ತಾಯಿಯ ಮನೆಯಾದ ಮಲ್ಲಾರ್ ಗ್ರಾಮಕ್ಕೆ ವಾಪಾಸು ಬಂದಿದ್ದರು.

ಮನೆಯವರು ಗಂಡನ ಬಗ್ಗೆ ವಿಚಾರಿಸಿದಾಗ ಅವರು ಎರಡು ದಿವಸ ಬಿಟ್ಟು ಇಲ್ಲಿಗೆ ಬರುತ್ತಾರೆ ಎಂದು ಪಿರ್ದೋಸ್ ತಿಳಿಸಿದ್ದರು. ಸೆ.19ರಂದು ತನ್ನ ಮಗು ವನ್ನು ತಾಯಿ ಮನೆಯಲ್ಲಿ ಬಿಟ್ಟು ಹೊರಗೆ ಹೋದ ಪಿರ್ದೋಸ್ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News