ಪ್ರಚೋದನಕಾರಿ ಭಾಷಣ: ಸಂಘಪರಿವಾರದ ಮುಖಂಡನ ಬಂಧನ ಶ್ಲಾಘನೀಯ; ಪಿಎಫ್‌ಐ

Update: 2018-09-22 15:28 GMT

ಮಂಗಳೂರು, ಸೆ.22: ಇಸ್ಲಾಮ್ ಧರ್ಮವನ್ನು ನಿಂದಿಸಿ ಪ್ರಚೋದನಕಾರಿ ಭಾಷಣ ಮಾಡಿರುವ ಹಿಂದೂ ಐಕ್ಯ ವೇದಿಕೆಯ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಎಂಬಾತನನ್ನು ಪೊಲೀಸರು ಬಂಧಿಸಿರುವುದು ಶ್ಲಾಘನಿಯ ಎಂದು ಪಿಎಫ್‌ಐ ದ.ಕ.ಜಿಲ್ಲಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ಮಂಜುನಾಥ ಎಂಬವನು ಇಸ್ಲಾಮ್ ಧರ್ಮವನ್ನು ನಿಂದಿಸಿ ಪ್ರಚೋದನಕಾರಿ ಭಾಷಣ ನಡೆಸಿದ ತಕ್ಷಣ ಎಚ್ಚೆತ್ತುಗೊಂಡ ಸಾರ್ವಜನಿಕರು ಸ್ಥಳೀಯ ಮುಸ್ಲಿಮ್ ಜಮಾಅತ್ ಕಮಿಟಿ ನಾಯಕರೊಂದಿಗೆ ಚರ್ಚಿಸಿ ಕೂಡಲೇ ಪೊಲೀಸ್ ಇಲಾಖೆಗೆ ದೂರು ನೀಡಿ ಸಂಭಾವ್ಯ ಅನಾಹುತವನ್ನು ತಪ್ಪಿಸಿದ್ದರು.ಅನುಮತಿ ಪಡೆಯದೆ ಕಾರ್ಯಕ್ರಮದಲ್ಲಿ ಧ್ವನಿವರ್ಧಕವನ್ನು ಬಳಸಿದ್ದಲ್ಲದೆ ಭಾಷಣಗೈದ ಮಂಜುನಾಥ ಉಡುಪ, ಕಾರ್ಯಕ್ರಮದ ಸಂಘಟಕ ಚೇತನ್ ಪೆಡಿಮಲೆ, ನಿರೂಪಕ ಭಾಸ್ಕರ್ ಟೇಲರ್ ಮತ್ತು ವೇದಿಕೆ ಯಲ್ಲಿ ಸುರೇಶ ಕೊಟ್ಟಾರಿ, ವರದರಾಜ ಕೊಟ್ಟಾರಿ, ಬಿ.ಕೆ ಕೃಷ್ಣಪ್ಪ ಸಾಲಿಯಾನ, ರಮೇಶ ಪೂಜಾರಿ ಎಂಬವರ ವಿರುದ್ಧ ಕಡಂಬು ಜುಮಾ ಮಸೀದಿಯ ಆಡಳಿತ ಸಮಿತಿ ಈ ದೂರು ನೀಡಿದ್ದರು.

ಈ ಹಿಂದೆಯೂ ಹಲವು ಬಾರಿ ಸಂಘಪರಿವಾರದ ನಾಯಕರ ಕೋಮು ಪ್ರಚೋದಕ ಭಾಷಣಗಳಿಂದ ಜಿಲ್ಲೆಯಲ್ಲಿ ಆಶಾಂತಿಯುಂಟಾಗಿತ್ತು. ಆದರೆ ಈ ಬಾರಿ ಕೂಡಲೆ ಸ್ಪಂದಿಸಿದ ಪೊಲೀಸ್ ಅಧಿಕಾರಿಗಳು ಸಂಘಪರಿವಾರದ ತಪ್ಪಿತಸ್ಥ ನಾಯಕನ ವಿರುದ್ಧ ಪೊಲೀಸ್ ವರಿಷ್ಠಾಧಿಕಾರಿಯು ಸಕಾಲದಲ್ಲಿ ಕ್ರಮ ಜರುಗಿಸಿರು ವುದು ಶ್ಲಾಘನೀಯ ಎಂದು ಪಿಎಫ್‌ಐ ದ.ಕ ಜಿಲ್ಲಾಧ್ಯಕ್ಷ ಮುಹಮ್ಮದ್ ಹನೀಫ್ ಕಾಟಿಪಳ್ಳ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News