ಸೆ.24: ತುಳು ವಿಕಿಪೀಡಿಯ ಮಾಹಿತಿ, ಕಲಿಕಾ ಶಿಬಿರ

Update: 2018-09-22 15:32 GMT

ಮಂಗಳೂರು, ಸೆ. 22: ತುಳುವೆರೆ ಆಯನೊ ಕೂಟ ಕುಡ್ಲ ಹಾಗೂ ಕರಾವಳಿ ವಿಕಿಪೀಡಿಯನ್ಸ್ ಮಂಗಳೂರು ಇವುಗಳ ನೇತೃತ್ವದಲ್ಲಿ ‘ತುಳು ವಿಕಿಪೀಡಿಯ ಮಾಹಿತಿ ಮತ್ತು ಕಲಿಕಾ ಶಿಬಿರವು ನಗರದ ಶ್ರೀ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನಲ್ಲಿ ಸೆ. 24ರಂದು ನಡೆಯಲಿದೆ.

ವಿಶ್ವದ ಸ್ವತಂತ್ರ ಮಾಹಿತಿಕೋಶವಾದ ವಿಕಿಪೀಡಿಯದಲ್ಲಿ ತುಳುಭಾಷೆಯ 1,500ಕ್ಕಿಂತಲೂ ಹೆಚ್ಚು ಲೇಖನಗಳನ್ನು ಒಳಗೊಂಡು ಭಾರತದ 23ನೇ ಭಾಷೆಯಾಗಿ ಸಜೀವಗೊಂಡಿದೆ. ವಿಕಿಪೀಡಿಯಾದಲ್ಲಿ ತುಳುನಾಡು, ನುಡಿಯ ಬಗ್ಗೆ ಇನ್ನಷ್ಟೂ ಲೇಖನ, ಬರಹ, ಶಬ್ಧ ಭಂಡಾರಗಳನ್ನು ವಿಸ್ತರಿಸುವ ಸಲುವಾಗಿ ಮತ್ತು ಈ ಬಗ್ಗೆ ಮಾಹಿತಿ ಹಾಗೂ ಅರಿವು ಮೂಡಿಸುವ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಶಿಬಿರವು ಸಂಪೂರ್ಣ ಉಚಿತವಾಗಿದ್ದು ಶಿಬಿರಾರ್ಥಿಗಳಿಗೆ ಊಟ ಮತ್ತು ಲಘು ಉಪಹಾರದ ವ್ಯವಸ್ಥೆಯನ್ನು ಮಾಡಲಾಗುವುದು. ಅಲ್ಲದೆ ಪ್ರಮಾಣ ಪತ್ರಗಳನ್ನು ನೀಡಲಾಗುವುದು. ಶಿಬಿರಾರ್ಥಿಗಳಿಗೆ ಕಂಪ್ಯೂಟರ್ ಜ್ಞಾನ ಮತ್ತು ಕನ್ನಡ ಕೀಲಿಮಣೆ ಪರಿಜ್ಞಾನವಿರಬೇಕು. ಆಸಕ್ತರು ಕಾಲೇಜಿನ ಪ್ರಾಚಾರ್ಯ ಡಾ. ಕಿಶೋರ್ ಕುಮಾರ್ ರೈ ಶೇಣಿ (ಮೊ.ಸಂ.9449592380), ಕರಾವಳಿ ವಿಕಿಮೀಡಿಯಸ್ಸ್ ಮಂಗಳೂರು ಇದರ ಅಧ್ಯಕ್ಷ ಡಾ.ವಿಶ್ವನಾಥ ಬದಿಕಾನ (8618361841), ತುಳುವೆರೆ ಆಯನೊ ಕೂಟದ ರಕ್ಷಿತ್ ಕುಡುಪು (9845765500) ಅವರನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News