ನವೆಂಬರ್‌ನಲ್ಲಿ ನಾಝಿ ಯಾತನಾ ಶಿಬಿರದ ಕಾವಲುಗಾರನ ವಿಚಾರಣೆ

Update: 2018-09-22 16:00 GMT

ಬರ್ಲಿನ್, ಸೆ. 22: ಎರಡನೇ ಮಹಾಯುದ್ಧದ ಅವಧಿಯಲ್ಲಿ ಸ್ಟತಾಫ್‌ನಲ್ಲಿನ ನಾಝಿ ಯಾತನಾ ಶಿಬಿರ (ಕಾನ್ಸಂಟ್ರೇಶನ್ ಕ್ಯಾಂಪ್)ದಲ್ಲಿ ನಡೆದ ಸಾಮೂಹಿಕ ಹತ್ಯಾಕಾಂಡದಲ್ಲಿ ಭಾಗಿಯಾದ ಆರೋಪ ಹೊತ್ತಿರುವ ಜರ್ಮನಿಯ ಮಾಜಿ ಭದ್ರತಾ ಸಿಬ್ಬಂದಿಯೋರ್ವನ ವಿಚಾರಣೆ ನವೆಂಬರ್‌ನಲ್ಲಿ ನಡೆಯಲಿದೆ ಎಂದು ಜರ್ಮನಿಯ ನ್ಯಾಯಾಲಯವೊಂದು ಶುಕ್ರವಾರ ತಿಳಿಸಿದೆ.

94 ವರ್ಷದ ಈ ವ್ಯಕ್ತಿ ಜರ್ಮನಿಯ ಬೋರ್ಕನ್ ಜಿಲ್ಲೆಯವನಾಗಿದ್ದು, ಆತನ ಹೆಸರನ್ನು ಬಹಿರಂಗಗೊಳಿಸಲಾಗಿಲ್ಲ.

 ‘ಎಸ್‌ಎಸ್ ಗಾರ್ಡ್’ ಎಂಬ ಹೆಸರಿನ ಭದ್ರತಾ ತುಕಡಿಯ ಸದಸ್ಯನಾಗಿದ್ದ ಅವನು ಹತ್ಯಾಕಾಂಡ ನಡೆದ ನಾಝಿ ಶಿಬಿರದ ಕಾವಲುಗಾರನಾಗಿದ್ದನು. ಆ ಶಿಬಿರದಲ್ಲಿ 1942-1945ರ ಅವಧಿಯಲ್ಲಿ ಸಾವಿರಾರು ಕೈದಿಗಳನ್ನು ಹತ್ಯೆ ಮಾಡಲಾಗಿತ್ತು.

ಈ ಹತ್ಯಾಕಾಂಡದಲ್ಲಿ ಆತನೂ ಶಾಮೀಲಾಗಿದ್ದಾನೆ ಎಂದು ಎರಡನೇ ಮಹಾಯುದ್ಧ ನಡೆದು ಏಳು ದಶಕಗಳು ಕಳೆದ ಬಳಿಕ ಮೋನ್‌ಸ್ಟರ್‌ನಲ್ಲಿನ ನ್ಯಾಯಾಲಯವೊಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News