ಅಮೆರಿಕ ಜೊತೆಗಿನ ವ್ಯಾಪಾರ ಮಾತುಕತೆ ರದ್ದುಪಡಿಸಿದ ಚೀನಾ

Update: 2018-09-22 16:04 GMT

ಬೀಜಿಂಗ್, ಸೆ. 22: ಅಮೆರಿಕದೊಂದಿಗೆ ಮುಂದಿನ ವಾರ ನಡೆಯಲು ನಿಗದಿಯಾಗಿದ್ದ ವ್ಯಾಪಾರ ಮಾತುಕತೆಗಳನ್ನು ಚೀನಾ ರದ್ದುಗೊಳಿಸಿದೆ ಹಾಗೂ ಅದು ಉಪಪ್ರಧಾನಿ ಲಿಯು ಹೆಯನ್ನು ವಾಶಿಂಗ್ಟನ್‌ಗೆ ಕಳುಹಿಸುವುದಿಲ್ಲ ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ಪತ್ರಿಕೆ ವರದಿ ಮಾಡಿದೆ.

ಲಿಯು ಭೇಟಿಗೆ ಪೂರ್ವಭಾವಿಯಾಗಿ ಚೀನಾದ ಮಧ್ಯಮ ಮಟ್ಟದ ನಿಯೋಗವೊಂದು ವಾಶಿಂಗ್ಟನ್‌ಗೆ ಪ್ರಯಾಣಿಸಬೇಕಾಗಿತ್ತು, ಆದರೆ ಅದನ್ನು ಈಗ ಕೈಬಿಡಲಾಗಿದೆ ಎಂದು ಪತ್ರಿಕೆ ತಿಳಿಸಿದೆ.

ಅಮೆರಿಕಕ್ಕೆ ಚೀನಾದಿಂದ ಆಮದಾಗುವ 200 ಬಿಲಿಯ ಡಾಲರ್ ವಸ್ತುಗಳಿಗೆ ಅಮೆರಿಕ ಹೆಚ್ಚುವರಿ ಆಮದು ಸುಂಕವನ್ನು ಹೇರಿತ್ತು. ಇದಕ್ಕೆ ಪ್ರತಿಯಾಗಿ, ಈ ವಾರ ಚೀನಾವು ಅಮೆರಿಕದಿಂದ ಆಮದಾಗುವ 60 ಬಿಲಿಯ ಡಾಲರ್ ವೌಲ್ಯದ ವಸ್ತುಗಳ ಮೇಲೆ ಹೆಚ್ಚುವರಿ ದಂಡನಾತ್ಮಕ ಆಮದು ಸುಂಕವನ್ನು ವಿಧಿಸಿರುವುದನ್ನು ಸ್ಮರಿಸಬಹುದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News