ಸೆ.30: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವತಿಯಿಂದ ‘ಗ್ರೀನ್ ವಾಕಥಾನ್- 2018’

Update: 2018-09-22 16:51 GMT

ಮಂಗಳೂರು, ಸೆ. 22: ಮಂಗಳೂರಿನ ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ) ಹಾಗೂ ಬ್ಯಾರೀಸ್ ಎನ್ವಯರೊ ಆರ್ಕಿಟೆಕ್ಚರ್ ಡಿಸೈನ್ ಸ್ಕೂಲ್ (ಬಿಇಎಡಿಎಸ್)ನ ಆಶ್ರಯದಲ್ಲಿ ಗ್ರೀನ್ ವಾಕಥಾನ್-2018 ಕಾರ್ಯಕ್ರಮ ಸೆ.30ರಂದು ಮಂಗಳಾ ಕ್ರೀಡಾಂಗಣದಿಂದ ಪುರಭವನದವರೆಗೆ ನಡೆಯಲಿದೆ.

ಸುಸ್ಥಿರ ಅಭಿವೃದ್ಧಿ, ಇಂಧನ ಉಳಿತಾಯ, ಮರುಬಳಕೆ, ಪರಿಸರದ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ಕನಿಷ್ಟಗೊಳಿಸುವುದು, ಮನೆ ಅಥವಾ ಕಟ್ಟಡದ ನಿವಾಸಿಗಳ ಆರೋಗ್ಯ ವರ್ಧನೆಯ ಬಗ್ಗೆ ಜಾಗೃತಿ ಮೂಡಿಸುವುದು ಹಾಗೂ ಮಂಗಳೂರಿನ ಜನತೆಯಲ್ಲಿ ಸ್ವಚ್ಛ ಮತ್ತು ಹಸಿರು ನಗರದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ನಡೆಯಲಿದೆ. ಸೆ.30ರಂದು ಬೆಳಿಗ್ಗೆ 7:30ಕ್ಕೆ ಮಂಗಳಾ ಕ್ರೀಡಾಂಗಣದಲ್ಲಿ ರಾಮಕೃಷ್ಣ ಮಿಷನ್‌ನ ಸ್ವಾಮಿ ಏಕಗಮ್ಯನಂದಾಜಿ ಹಸಿರು ನಿಶಾನೆ ತೋರಲಿದ್ದಾರೆ. ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು.

ನಗರದ ಪುರಭವನದಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ವಸತಿ ಸಚಿವ ಯು.ಟಿ.ಖಾದರ್, ಶಾಸಕ ಡಿ.ವೇದವ್ಯಾಸ ಕಾಮತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News