ಸೆ. 24ರಿಂದ ಸಂತ ಆಗ್ನೆಸ್ ಕಾಲೇಜಿನಲ್ಲಿ ವಿಚಾರ ಸಂಕಿರಣ

Update: 2018-09-22 17:13 GMT

ಮಂಗಳೂರು, ಸೆ. 22: ಸಂತ ಆಗ್ನೆಸ್ ಕಾಲೇಜಿನ ಸ್ನಾತಕೋತ್ತರ ವಿಭಾಗ ಹಾಗೂ ಸಂಶೋಧನಾ ಕೇಂದ್ರದ ವಾಣಿಜ್ಯ ವಿಭಾಗದ ವತಿಯಿಂದ ಸೆ.24 ಮತ್ತು 25ರಂದು ‘ಪ್ರಕ್ಷುಬ್ಧ ಜಾಗತಿಕ ಮಾರುಕಟ್ಟೆಯಲ್ಲಿ ವ್ಯವಹಾರದ ಸ್ಥಿತಿಸ್ಥಾಪಕತ್ವ’ ಎಂಬ ವಿಷಯದ ಕುರಿತು ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ.ಕ್ಯಾತರೀನ್ ನಿರ್ಮಲ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸೆ.24ರಂದು ಪೂರ್ವಾಹ್ನ 9:30ಕ್ಕೆ ವಿಚಾರ ಸಂಕಿರಣವನ್ನು ಕೀನ್ಯದ ಕರಟೀನ ವಿಶ್ವ ವಿದ್ಯಾನಿಲಯದ ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಜೋಡಣೆ ಮತ್ತು ಸಂಶೋಧನೆ ಇದರ ನಿರ್ದೇಶಕ ಪ್ರೊ.ಗಿಲ್ಬರ್ಟ್ ಎಂ.ಡುರು ಉದ್ಘಾಟಿಸಲಿದ್ದಾರೆ. ಕಾಲೇಜಿನ ಪ್ರಾಂಶುಪಾಲ ಎಂ.ಜಸ್ವೀನಾ ಎಸಿ ಅಧ್ಯಕ್ಷತೆ ವಹಿಸಲಿದ್ದು, ನೇಪಾಲದ ಶಿವಂ ಹೋಲ್ಡಿಂಗ್ ಸಂಸ್ಥೆಯ ಮುಖ್ಯಸ್ಥ ವಿಶ್ವನಾಥ್ ಗೋಯಲ್, ಜಯದೇವ ಮೋಟರ್ರ್ಸ್‌ನ ರೇಣು ಜಯರಾಂ ಮತ್ತು ಪ್ರೊ.ಗಿಲ್ಬರ್ಟ್ ಡುರು ಸಂಪನ್ಮೂಲ ವ್ಯಕ್ತಿಗಳಾಗಿ ವಿಚಾರ ಮಂಡಿಸಲಿದ್ದಾರೆ.

ಕಾರ್ಯಕ್ರಮದಲ್ಲಿ 300ಕ್ಕೂ ಅಧಿಕ ಉಪನ್ಯಾಸಕರು, ಸಂಶೋಧಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಕಾಲೇಜಿನ ವಿದ್ಯಾರ್ಥಿಗಳು ಪ್ರಬಂಧ ಮಂಡಿಸಲಿದ್ದಾರೆ. ಈ ಸಂದರ್ಭ ಸಂತ ಅಗ್ನೆಸ್ ಕಾಲೇಜು ಹಾಗೂ ಕರಟೀನ ವಿಶ್ವವಿದ್ಯಾನಿಲಯ ಶೈಕ್ಷಣಿಕ ವಿನಿಮಯದ ಬಗ್ಗೆ ಒಡಂಬಡಿಕೆಯೂ ಆಗಲಿದೆ ಎಂದು ಡಾ.ಕ್ಯಾತರೀನ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಸಂಘಟಕರಾದ ಡೋಲನ್ ಬ್ಯಾನರ್ಜಿ ಆಮ್ರಾ ಅರಬಿ, ಮುಹಮ್ಮದ್ ತೌಸ್ೀ, ಜಯಲಕ್ಷ್ಮೀ ಪೈಲೂರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News