ಬಿ.ಸಿ.ರೋಡ್: ಗ್ಯಾರೇಜು ಮಾಲಕರ ಸಂಘದಿಂದ ವೈದ್ಯಕೀಯ ಶಿಬಿರ

Update: 2018-09-23 11:22 GMT

ಬಂಟ್ವಾಳ, ಸೆ.23: ದಕ್ಷಿಣ ಕನ್ನಡ ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಬಂಟ್ವಾಳ ವಲಯ ಹಾಗೂ ಯೆನೆಪೊಯ ಸ್ಪೆಶಾಲಿಟಿ ಆಸ್ಪತ್ರೆ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಉಚಿತ ವೈದ್ಯಕೀಯ ಶಿಬಿರ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ರವಿವಾರ ನಡೆಯಿತು.

ಶಿಬಿರವನ್ನು ಉದ್ಘಾಟಿಸಿದ ಬಂಟ್ವಾಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಸದಾಶಿವ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿ ತನ್ನ ಜವಬ್ದಾರಿಯನ್ನು ಅರಿತುಕೊಂಡು ಕೆಲಸ ಮಾಡಿದಾಗ ಸಮಾಜ ಒಳ್ಳೆಯ ದಾರಿಯಲ್ಲಿ ಸಾಗಲು ಸಾಧ್ಯವಿದೆ. ಗ್ಯಾರೇಜು ಮಾಲಕರ ಸಂಘ ವೈದ್ಯಕೀಯ ಶಿಬಿರವನ್ನು ಆಯೋಜಿಸುವ ಮೂಲಕ ಜನರಿಗೆ ಆರೋಗ್ಯ ಬಾಗ್ಯ ನೀಡುವುದರ ಜೊತೆಗೆ ಅವರಲ್ಲಿ ಆರೋಗ್ಯದ ಜಾಗೃತಿ ಮೂಡಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬಂಟ್ವಾಳ ಪೊಲೀಸ್ ವೃತ್ತ ನಿರೀಕ್ಷಕ ಟಿ.ಡಿ.ನಾಗರಾಜ್ ಮುಖ್ಯ ಅತಿಥಿಯಾಗಿದ್ದರು.
ಸಂಘದ ಅಧ್ಯಕ್ಷ ಬಿ.ವಿಶ್ವನಾಥ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ದ.ಕ. ಜಿಲ್ಲಾ ಗ್ಯಾರೇಜು ಮಾಲಕರ ಸಂಘದ ಅಧ್ಯಕ್ಷ ದಿವಾಕರ, ಯೆನೆಪೊಯ ಮೆಡಿಕಲ್ ಕಾಲೇಜಿನ ಸಮಾಜ ಕಾರ್ಯ ವಿಬಾಗದ ಮುಖ್ಯಸ್ಥ ಡಾ. ಮುಹಮ್ಮದ್ ಗುತ್ತಿಗಾರು ಉಪಸ್ಥಿತರಿದ್ದರು.

ಸಂಘದ ಸದಸ್ಯರಾದ ಗಣೇಶ್ ಸುವರ್ಣ, ಜಗದೀಶ್ ರೈ, ರಮೇಶ್ ಭಂಡಾರಿ, ರಾಜೇಶ್ ಸಾಲ್ಯಾನ್ ಮೊದಲಾದವರು ಹಾಜರಿದ್ದರು.

ಸದಸ್ಯ ಸಿದ್ದೀಕ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಸುಧೀರ್ ಪ್ರಸ್ತಾವಿಸಿದರು. ಪ್ರಶಾಂತ್ ಭಂಡಾರ್‌ಕಾರ್ ವಂದಿಸಿದರು. ಸುಧಾಕರ ಸಾಲ್ಯಾನ್ ಕಾರ್ಯಕ್ರಮ ನಿರೂಪಿಸಿದರು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News