ಗ್ರಾಮಾಂತರ ಆಟೊ ರಿಕ್ಷಾಗಳಿಂದ ಸಮಸ್ಯೆ: ಬಿ.ಸಿ.ರೋಡಿನ ರಿಕ್ಷಾ ಚಾಲಕರಿಂದ ಎಎಸ್ಪಿಗೆ ದೂರು

Update: 2018-09-23 11:35 GMT

ಬಂಟ್ವಾಳ ಸೆ.23: ಗ್ರಾಮಾಂತರ ಆಟೊ ರಿಕ್ಷಾಗಳಿಂದ ನಮಗೆ ಬಾಡಿಗೆ ಮಾಡಲು ತೊಡಕುಂಟಾಗುತ್ತಿದೆ ಎಂದು ಆಕ್ಷೇಪಿಸಿ ಬಿ.ಸಿ.ರೋಡಿನ ಆಟೊ ರಿಕ್ಷಾ ಚಾಲಕರು ಬಂಟ್ವಾಳ ಎಎಸ್ಪಿ ರಿಶಿಕೇಶ್ ಸೋನಾವನೆ ಅವರಿಗೆ ದೂರು ನೀಡಿದ್ದಾರೆ.

ಗ್ರಾಮಾಂತರ ಪ್ರದೇಶದ ಪರವಾನಿಗೆ ಹೊಂದಿರುವ ಆಟೊ ರಿಕ್ಷಾಗಳು ಬಿ.ಸಿ.ರೋಡ್‌ನ ರಿಕ್ಷಾ ಪಾರ್ಕ್‌ನಲ್ಲಿ ಬಾಡಿಗೆ ಮಾಡುತ್ತಿವೆ. ಇದರಿಂದ ತಾಲೂಕು ಪರವಾನಿಗೆ ಹೊಂದಿರುವ ಬಿ.ಸಿ.ರೋಡ್‌ನ ಆಟೊ ರಿಕ್ಷಾಗಳಿಗೆ ಬಾಡಿಗೆ ಸಿಗದೆ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಒತ್ತಾಯಿಸಲಾಗಿದೆ. ಮನವಿಗೆ ಸ್ಪಂದಿಸಿದ ಎಎಸ್ಪಿ ಈ ಬಗ್ಗೆ ಕ್ರಮದ ಭರವಸೆ ನೀಡಿದ್ದಾರೆ.

ಈ ಸಂದರ್ಭ ಬಿ.ಸಿ.ರೋಡ್ ಪರಿಸರದ ಆಟೋ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News