×
Ad

ಮಂಗಳೂರು: ‘ಗ್ಲೋಬಲ್ ವೆಡ್ಡಿಂಗ್ ಕಾರ್ಡ್ಸ್’ ಮಳಿಗೆ ಉದ್ಘಾಟನೆ

Update: 2018-09-23 17:30 IST

ಮಂಗಳೂರು, ಸೆ.23: ನಗರದ ರಾವ್ ಆ್ಯಂಡ್ ರಾವ್ ಸರ್ಕಲ್ ಬಳಿಯ ಪೆಟ್ರೋಲ್ ಪಂಪ್ ಸಮೀಪದ ಸಹಕಾರಿ ಸದನದಲ್ಲಿ ‘ಗ್ಲೋಬಲ್ ವೆಡ್ಡಿಂಗ್ ಕಾರ್ಡ್ಸ್’ ಮಳಿಗೆ ರವಿವಾರ ಉದ್ಘಾಟನೆಗೊಂಡಿತು.

ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಮಳಿಗೆಯನ್ನು ಉದ್ಘಾಟಿಸಿ ಶುಭ ಹಾರೈಸಿದರು. ಇಸ್ಮಾಯೀಲ್ ಸಖಾಫಿ ದುಆಗೈದರು.

ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಬಿ.ರಮಾನಾಥ ರೈ, ಶಾಸಕ ವೇದವ್ಯಾಸ ಕಾಮತ್, ಮೇಯರ್ ಭಾಸ್ಕರ ಮೊಯ್ಲಿ, ಮನಪಾ ವಿಪಕ್ಷ ನಾಯಕ ಪ್ರೇಮಾನಂದ ಶೆಟ್ಟಿ, ಕಾರ್ಪೊರೇಟರ್ ಲತೀಫ್ ಕಂದುಕ ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ‘ಗ್ಲೋಬಲ್ ವೆಡ್ಡಿಂಗ್ ಕಾರ್ಡ್ಸ್’ ಮಳಿಗೆಯ ಮಾಲಕ ಅಬೂಬಕರ್ ಸಿದ್ದೀಕ್ ಹಾಗೂ ಅವರ ತಂದೆ ಟಿ. ಹುಸೈನ್ ಕೊಣಾಜೆ, ಸಿಬ್ಬಂದಿಯಾದ ಜಗನ್ನಾಥ ಸಾಲ್ಯಾನ್, ಪ್ರಕಾಶ್ ಹೆಬ್ಬಾರ್ ಉಪಸ್ಥಿತರಿದ್ದರು.

* ‘ಗ್ಲೋಬಲ್ ವೆಡ್ಡಿಂಗ್ ಕಾರ್ಡ್ಸ್’ ಮಳಿಗೆಯಲ್ಲಿ ಎಲ್ಲಾ ವಿಧದ ಮದುವೆ ಸಹಿತ ಮತ್ತಿತರ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳು, ಕಾರ್ಡ್‌ಗಳು ಮಿತ ದರದಲ್ಲಿ ಲಭ್ಯವಿವೆ. ವಿಶೇಷ ವಿನ್ಯಾಸದ ಕಾರ್ಡ್‌ಗಳ ಭಾರೀ ಸಂಗ್ರಹವೇ ಇಲ್ಲಿದ್ದು, ಗ್ರಾಹಕರನ್ನು ಆಕರ್ಷಿಸುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News