ಪಂತಡ್ಕ: ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟ

Update: 2018-09-23 13:08 GMT

ಬಂಟ್ವಾಳ, ಸೆ.23: ಕ್ರೀಡಾಕೂಟಗಳು ಸಮಾಜದಲ್ಲಿ ಶಾಂತಿ, ಸೌಹಾರ್ದ, ಸಹಬಾಳ್ವೆಯ ಬದುಕಿಗೆ ಪೂರಕ ಎಂದು ನೆಟ್ಲಮುಡ್ನೂರು ಗ್ರಾ.ಪಂ. ಸದಸ್ಯ ಲತೀಫ್ ನೇರಳಕಟ್ಟೆ ಹೇಳಿದರು. 

ಕೊಡಾಜೆ - ಪಂತಡ್ಕದ ಚಾಯ್ಸ್ ಕ್ರಿಕೆಟರ್ಸ್ ಆಶ್ರಯದಲ್ಲಿ ಪಂತಡ್ಕದಲ್ಲಿ ನಡೆದ ಏಳು ಜನರ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕ್ರೀಡೆಗಳಿಂದ ಶಾರೀರಿಕ ಹಾಗೂ ಸಾಮಾಜಿಕ ಸಮತೋಲನ ಸಾಧ್ಯ ಎಂದು ಅಭಿಪ್ರಾಯಪಟ್ಟರು. 

ಪಂದ್ಯಾಟವನ್ನು ಡಾ.ಗಣರಾಜ್ ಎಲ್ಕಣ ಉದ್ಘಾಟಿಸಿದರು. ಮಾಣಿ ಗ್ರಾ.ಪಂ. ಸದಸ್ಯ ಸುದೀಪ್ ಕುಮಾರ್ ಶೆಟ್ಟಿ, ನಾಟಿ ವೈದ್ಯ ಗಂಗಾಧರ ಪಂಡಿತ್, ಉದ್ಯಮಿ ಗಿರೀಶ್ ದಾಸಕೋಡಿ, ಪ್ರಮುಖರಾದ ಇಸಾಕ್ ಗೋಳಿಕಟ್ಟೆ, ಪ್ರಶಾಂತ್ ಅಂಗರಾಜೆ, ಹಾರೂನ್ ಮಾಣಿ, ರಫೀಕ್ ಪಂತಡ್ಕ, ಹಮೀದ್ ಪಂತಡ್ಕ, ಆದಂ ಅನಂತಾಡಿ, ಶೇಖರ ಪೂಜಾರಿ ಪಂತಡ್ಕ, ಬದ್ರುದ್ದೀನ್ ನೇರಳಕಟ್ಟೆ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 

ಆಸಿಫ್ ಅನಂತಾಡಿ ಸಮ್ಮಸ್ ನೇರಳಕಟ್ಟೆ, ರಫೀಕ್ ಒಕ್ಕೆತ್ತೂರು, ಬಶೀರ್ ನೇರಳಕಟ್ಟೆ, ನವಾಝ್ ಮೇಗಿನಪೇಟೆ, ರಿಯಾಝ್ ನೇರಳಕಟ್ಟೆ, ನವಾಝ್ ಕೊಡಾಜೆ, ಖಿಲ್ರ್ ಅಬ್ಬಾಸ್ ಕೊಡಾಜೆ, ಇಸ್ಮಾಯೀಲ್ ಅನಂತಾಡಿ, ಫಾರೂಕ್ ಭಗವಂತಕೋಡಿ, ನಝೀರ್ ಕೆಂಪುಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು. 

ಕನ್ಯಾನ  ಚಕ್ರವರ್ತಿ ತಂಡಕ್ಕೆ ಪ್ರಶಸ್ತಿ:
ಎರಡು ದಿನಗಳಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ 46 ತಂಡಗಳು ಭಾಗವಹಿಸಿದ್ದು, ಕನ್ಯಾನದ ಚಕ್ರವರ್ತಿ ಕನ್ಯಾನ ತಂಡವು ಪ್ರಥಮ ಹಾಗೂ ಬಂಟ್ವಾಳದ ಜೆ.ಡಿ.ಬಾಯ್ಸ್ ತಂಡವು ದ್ವಿತೀಯ ಸ್ಥಾನ ಗಳಿಸಿದವು. 

ಕನ್ಯಾನ ತಂಡದ ಅಶ್ರಫ್, ರಾಧಾ, ಮತ್ತು ಬಂಟ್ವಾಳ ತಂಡದ ಮುನೀರ್ ವೈಯುಕ್ತಿಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News