ರಾಯಿ: 'ಸಾಂಧ್ರ ಶೀತಲೀಕರಣ ಘಟಕ-ವಿಸ್ತತ ಕಟ್ಟಡ' ಉದ್ಘಾಟನೆ

Update: 2018-09-23 14:02 GMT

ಬಂಟ್ವಾಳ, ಸೆ.23: ಅವಿಭಜಿತ ಜಿಲ್ಲೆಯಲ್ಲಿ ಶೇ.90ರಷ್ಟು ಜನತೆ ನಂದಿನಿ ಹಾಲು ಉಪಯೋಗಿಸುತ್ತಿದ್ದು, ಇಲ್ಲಿನ ಹೈನುಗಾರರಿಗೆ ಪ್ರೋತ್ಸಾಹ ನೀಡುವುದರ ಜೊತೆಗೆ ಬೇಡಿಕೆಗೆ ತಕ್ಕಂತೆ ಗುಣಮಟ್ಟದ ಹಾಲು ಪೂರೈಸಲು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟವು ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಕೂಡಾ ಈಗಾಗಲೇ ಒಟ್ಟು 109 ಸಾಂಧ್ರ ಶೀತಲೀಕರಣ ಘಟಕ ಆರಂಭಿಸಲಾಗಿದೆ ಎಂದು ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ.ರವಿರಾಜ ಹೆಗ್ಡೆ ಕೊಡವೂರು ಹೇಳಿದ್ದಾರೆ.

ತಾಲೂಕಿನ ರಾಯಿ ಹಾಲು ಉತ್ಪಾದಕರ ಸಹಕಾರಿ ಸಂಘದ ವತಿಯಿಂದ ನಿರ್ಮಾಣಗೊಂಡ 'ಸಾಂಧ್ರ ಶೀತಲೀಕರಣ ಘಟಕ'ವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇದೇ ಸಂದರ್ಭ ನೂತನ ವಿಸ್ತೃತ ಕಟ್ಟಡವನ್ನು ಶಾಸಕ ರಾಜೇಶ್ ನಾಯ್ಕ್ ಉದ್ಘಾಟಿಸಿದರು.

ಜಿಲ್ಲಾ ಪಂಚಾಯತ್ ಸದಸ್ಯ ಎಂ.ತುಂಗಪ್ಪ ಬಂಗೇರ ಮಾತನಾಡಿದರು. ರಾಯಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸುಂದರ ಭಂಡಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಒಕ್ಕೂಟ ಉಪಾಧ್ಯಕ್ಷೆ ಕೆ.ಪಿ.ಸುಚರಿತ ಶೆಟ್ಟಿ, ನಿರ್ದೇಶಕರಾದ ನರಹರಿ ಪ್ರಭು, ವೀಣಾ ಆರ್. ರೈ, ವ್ಯವಸ್ಥಾಪಕ ನಿರ್ದೇಶಕ ಡಾ.ಬಿ.ವಿ.ಸತ್ಯನಾರಾಯಣ, ವ್ಯವಸ್ಥಾಪಕ ಡಾ.ನಿತ್ಯಾನಂದ ಭಕ್ತ, ಸಹಕಾರ ಸಂಘಗಳ ಅಭಿವೃದ್ಧಿ ಅಧಿಕಾರಿ ತ್ರಿವೇಣಿ ರಾವ್ ಕೆ. ಮತ್ತಿತರರು ಶುಭ ಹಾರೈಸಿದರು.

ರಾಯಿ ಗ್ರಾಮ ಪಂಚಾಯತ್ ಅಧ್ಯಕ್ಷ ಬಿ.ದಯಾನಂದ ಸಪಲ್ಯ, ತಾಲೂಕು ಪಂಚಾಯತ್ ಸದಸ್ಯೆ ಮಂಜುಳಾ ಸದಾನಂದ, ಒಕ್ಕೂಟ ಉಪ ವ್ಯವಸ್ಥಾಪಕರಾದ ಡಾ.ಟಿ.ವಿ.ಶ್ರೀನಿವಾಸ್, ಡಾ.ಮಧುಸೂದನ್ ಕಾಮತ್, ಸಂಘದ ಕಾರ್ಯದರ್ಶಿ ಎಂ.ಸದಾನಂದ ಗೌಡ ಹಾಜರಿದ್ದರು.

ಸಂಘದ ನಿರ್ದೇಶಕ ಜಿ.ರಾಮಸುಂದರ ಗೌಡ ಸ್ವಾಗತಿಸಿದರು. ಸದಸ್ಯ ನವೀನಚಂದ್ರ ಮುದ್ದಾಜೆ ವಂದಿಸಿದರು. ಒಕ್ಕೂಟ ವಿಸ್ತರಣಾಧಿಕಾರಿ ಎ.ಜಗದೀಶ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News