'ಪ್ರಸ್ತುತ' ಪಾಕ್ಷಿಕದ ವತಿಯಿಂದ ಮಹಿಳಾ ಬರಹಗಾರರ ಕಮ್ಮಟ

Update: 2018-09-23 16:07 GMT

ಮಂಗಳೂರು, ಸೆ.23: 'ಪ್ರಸ್ತುತ' ಪಾಕ್ಷಿಕದ ವತಿಯಿಂದ ‘ಮಹಿಳಾ ಬರಹಗಾರರ ಕಮ್ಮಟ’ವು ನಗರದ ಬಲ್ಮಠದಲ್ಲಿರುವ ಸಹೋದಯ ಸಭಾಂಗಣದಲ್ಲಿ ರವಿವಾರ ಜರುಗಿತು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಬದ್ರಿಯಾ ಪದವಿ ಪೂರ್ವ ಕಾಲೇಜಿನ ನಿವತ್ತ ಪ್ರಾಂಶುಪಾಲ ಡಾ.ಎನ್.ಇಸ್ಮಾಯೀಲ್ ‘ಮಹಿಳೆ ಮತ್ತು ಬರಹ’, ವಿಜಯಕರ್ನಾಟಕ ಪತ್ರಿಕೆಯ ಮಂಗಳೂರು ಆವತ್ತಿಯ ಹಿರಿಯ ಸಹ ಸಂಪಾದಕಿ ಡಾ.ಸೀತಾಲಕ್ಷ್ಮೀ ‘ಬರಹ ಹೇಗೆ?’, 'ಪ್ರಸ್ತುತ'ದ ಪ್ರಧಾನ ಸಂಪಾದಕ ಕೆ.ಎಂ.ಶರೀಫ್ ‘ನಮ್ಮ ಪತ್ರಿಕೆಗೆ ನಿಮ್ಮ ಅಗತ್ಯ’ ಎಂಬ ವಿಷಯದಲ್ಲಿ ತರಗತಿ ನಡೆಸಿದರು.

ಈ ಸಂದರ್ಭ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್‌ ಕೆಮ್ಮಾರ, ಪ್ರಸ್ತುತ ಪಾಕ್ಷಿಕ ಸಂಪಾದಕಿಯ ಮಂಡಳಿಯ ಸದಸ್ಯ ಹಾಗೂ ಕಥೆಗಾರ ಕೆ.ವೈ.ಅಬ್ದುಲ್ ಹಮೀದ್ ಮುಸ್ಲಿಯಾರ್, ವ್ಯವಸ್ಥಾಪಕ ಅಬ್ದುಲ್ ರಹೀಂ ಉಪಸ್ಥಿತರಿದ್ದರು.

ಮಹಿಳಾ ಲೇಖಕಿಯರು, ಉದಯೋನ್ಮುಖ ಬರಹಗಾರರು, ಪತ್ರಿಕೋದ್ಯಮ ವಿದ್ಯಾರ್ಥಿನಿಯರು ಕಮ್ಮಟದಲ್ಲಿ ಭಾಗವಹಿಸಿದ್ದರು.

ಪ್ರಸ್ತುತ ಸಂಪಾದಕ ಝಿಯಾವುಲ್ ಹಖ್ ಸ್ವಾಗತಿಸಿದರು. ಸಂಪಾದಕೀಯ ಮಂಡಳಿಯ ಸದಸ್ಯೆ ಶಾಹಿದಾ ಅಸ್ಲಂ ಸಮಾರೋಪಗೈದರು. ಸುಮಯ್ಯ ಅಥಾವುಲ್ಲಾ ಕಾರ್ಯಕ್ರಮ ನಿರೂಪಿಸಿದರು. ಸುಹಾನಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News