ಉಡುಪಿ ಜಿಲ್ಲಾ ಮಟ್ಟದ ಯುವಜನೋತ್ಸವ: ಮಲ್ಪೆ ಸರಸ್ವತಿ ಯುವಕ ಮಂಡಲ ಜಾನಪದ ನೃತ್ಯದಲ್ಲಿ ಪ್ರಥಮ

Update: 2018-09-23 17:15 GMT

ಉಡುಪಿ, ಸೆ.23: ಜಿಲ್ಲಾಡಳಿತ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗಳ ಜಂಟಿ ಆಶ್ರಯದಲ್ಲಿ ಇಂದು ಅಜ್ಜರಕಾಡಿನ ಪುರಭವನದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಯುವ ಜನೋತ್ಸವ 2018-19ರ ಜಾನಪದ ನೃತ್ಯ ಸ್ಪರ್ಧೆಯಲ್ಲಿ ಮಲ್ಪೆಯ ಸರಸ್ವತಿ ಯುವಕ ಮಂಡಲ ಪ್ರಥಮ ಬಹುಮಾನವನ್ನು ಗೆದ್ದುಕೊಳ್ಳುವ ಮೂಲಕ ರಾಜ್ಯಮಟ್ಟದಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದುಕೊಂಡಿತು.

ಸ್ಪರ್ಧೆಗಳ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಜಿಪಂ ಅಧ್ಯಕ್ಷ ದಿನಕರ ಬಾಬು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿಜೇತ ತಂಡಗಳಿಗೆ ಹಾಗೂ ವೈಯಕ್ತಿಕ ಸ್ಪರ್ಧಾ ವಿಭಾಗಗಳಲ್ಲಿ ಸ್ಪರ್ಧಿಸಿ ಗೆದ್ದ ಸ್ಪರ್ಧಿಗಳಿಗೆ ಬಹುಮಾನಗಳನ್ನು ವಿತರಿಸಿದರು. ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

 ಉದ್ಘಾಟನೆ: ಬೆಳಗ್ಗೆ ಶಾಸಕ ಕೆ.ರಘುಪತಿ ಭಟ್ ಜ್ಯೋತಿ ಬೆಳಗಿಸಿ ಯುವಜನೋತ್ಸವವನ್ನು ಉದ್ಘಾಟಿಸಿದ್ದರು. ಈ ಸಂದರ್ಭದಲ್ಲಿ ಜಿಪಂ ಅದ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಡಾ.ರೋಶನ್ ಕುಮಾರ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರು. ಡಾ.ಜಿ.ಶಂಕರ್ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಪ್ರಕಾಶ್ ಕ್ರಮಧಾರಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ಸ್ಪರ್ಧೆಗಳ ಫಲಿತಾಂಶ:

ಜಾನಪದ ನೃತ್ಯ: ಸರಸ್ವತಿ ಯುವಕ ಮಂಡಲ ಮಲ್ಪೆ (ಪ್ರಥಮ), ಶ್ರೀಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ (ದ್ವಿತೀಯ).

ಜಾನಪದ ಹಾಡು: ಶ್ರೀಚೆನ್ನಬಸವೇಶ್ವರ ಯುವಕ ಮಂಡಲ ನಾಯಕವಾಡಿ (ಪ್ರಥಮ), ಸರಸ್ವತಿ ಯುವಕ ಮಂಡಲ ಮಲ್ಪೆ (ದ್ವಿತೀಯ).

ಶಾಸ್ತ್ರೀಯ ವಾದ್ಯ ತಬಲಾ: ತುಷಾರ್ ಕರ್ಕೇರ, ನಾರಾಯಣಗುರು ಆಂಗ್ಲ ಮಾಧ್ಯಮ ಶಾಲೆ ಮಲ್ಪೆ (ಪ್ರಥಮ), ಅಶ್ವತ್ ಶೆಣೈ, ಸೈಂಟ್ ಫ್ರಾನ್ಸಿಸ್ ಕ್ಸೇವಿಯರ್ ಶಾಲೆ ಮುದರಂಗಡಿ (ದ್ವಿತೀಯ), ರೂಪೇಶ್ ನಾಯಕ್, ವಿ ಬಿ ಬಾಳಿಗಾ ಕಾನೂನು ಮಹಾವಿದ್ಯಾಲಯ ಉಡುಪಿ(ತೃತೀಯ).

ಕೊಳಲು ವಾದನ: ಗೌತಮ್, ಸರಸ್ವತಿ ಯುವಕ ಮಂಡಲ ಮಲ್ಪೆ (ಪ್ರಥಮ), ಜ್ಞಾನೇಶ್ ಕರ್ಕೇರ ಮಲ್ಪೆ (ದ್ವಿತೀಯ), ಆಕಾಶ್ (ತೃತೀಯ).

ಹಾರ್ಮೋನಿಯಂ: ಜ್ಞಾನೇಶ ಕರ್ಕೇರ ಮಲ್ಪೆ (ಪ್ರಥಮ), ಅನಿರುದ್ಧ್ ಕಾಮತ್, ಪಿಪಿಸಿ ಕಾಲೇಜು ಉಡುಪಿ (ದ್ವಿತೀಯ), ವಿಜೇತಾ ನಾಯಕ್, ಡಾ.ಜಿ.ಶಂಕರ್ ಮಹಿಳಾ ಕಾಲೇಜು ಉಡುಪಿ (ತೃತೀಯ).

ಗಿಟಾರ್ ವಾದನ: ಸಾಗರ್ ಆರ್.ಆಚಾರ್ಯ, ವಿ.ಬಿ.ಬಾಳಿಗಾ ಕಾನೂನು ಕಾಲೇಜು ಉಡುಪಿ (ಪ್ರಥಮ). ಶಾಸ್ತ್ರೀಯ ನೃತ್ಯ ಭರತನಾಟ್ಯ: ಸುಪ್ರೀತಾ ವೈದ್ಯ ಉಡುಪಿ (ಪ್ರಥಮ), ಮೈತ್ರಿ ಪಿ.ಆರ್., ಉಡುಪಿ (ದ್ವಿತೀಯ), ಬಿ.ಯುಕ್ತಿ ಉಡುಪ ಉಡುಪಿ (ತೃತೀಯ).

ಆಶುಭಾಷಣ ಸ್ಪರ್ಧೆ: ಸ್ಮತಿ ಸುರೇಶ್, ವಿ.ಬಿ.ಬಾಳಿಗಾ ಕಾನೂನು ಕಾಲೇಜು ಉಡುಪಿ(ಪ್ರಥಮ), ಶಮಿತಾ ಮೂಡುಬೆಳ್ಳೆ, ಸರಸ್ವತಿ ಯುವಕ ಮಂಡಲ ಮಲ್ಪೆ (ದ್ವಿತೀಯ), ಸ್ವಾತಿ, ಡಾ.ಜಿ.ಶಂಕರ ಮಹಿಳಾ ಕಾಲೇಜು ಉಡುಪಿ (ತೃತೀಯ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News