ಸಂತ ಪಾದ್ರೆ ಪಿಯೊ ಪುಣ್ಯ ಸ್ಮರಣೆಯ 50ನೇ ವರ್ಷಾಚರಣೆ

Update: 2018-09-23 15:27 GMT

ಮಂಗಳೂರು, ಸೆ.23: ಕೆಥೊಲಿಕ್ ಕ್ರೈಸ್ತ ಸಂತ (ಕಪುಚಿನ್ ಸಂಸ್ಥೆ) ಪಾದ್ರೆ ಪಿಯೊ ಅವರು ಯೇಸು ಕ್ರಿಸ್ತರ ಪಂಚ ಗಾಯಗಳನ್ನು (ಕ್ಷತಿ ಚಿಹ್ನೆ) ಪಡೆದುದರ ಶತಮಾನೋತ್ಸವ ಹಾಗೂ ಅವರ ಪುಣ್ಯ ಸ್ಮರಣೆಯ 50ನೇ ವರ್ಷಾಚರಣೆ ಕಾರ್ಯಕ್ರಮವು ನಗರದ ಜೈಲ್ ರಸ್ತೆಯಲ್ಲಿರುವ (ಬಿಜೈ) ಸಂತ ಪಿಯೊ ಪುಣ್ಯ ಕ್ಷೇತ್ರದಲ್ಲಿ ರವಿವಾರ ನಡೆಯಿತು. ಬಲಿಪೂಜೆಯಲ್ಲಿ ಮಂಗಳೂರಿನ ಬಿಷಪ್ ರೆ. ಡಾ.ಪೀಟರ್ ಪಾವ್ಲ್ ಸಲ್ದಾನ ಪ್ರಧಾನ ಗುರುಗಳಾಗಿದ್ದರು. ಬಳಿಕ ಸಂದೇಶ ನೀಡಿದ ಅವರು, ‘ಕ್ರಿಸ್ತರ ಗಾಯಗಳಿಂದ ಅಲಂಕೃತಗೊಂಡ ಹಾಗೂ ಕ್ರಿಸ್ತರ ಪ್ರೀತಿಯಿಂದ ಬೆಳಗಿದ ಮಹಾನ್ ಸಂತ’ ಪಾದ್ರೆ ಪಿಯೊ ಮಹಾನ್ ಸಂತರಾಗಿದ್ದಾರೆ ಎಂದು ಹೇಳಿದರು. ತಮ್ಮ ದೇಹದಲ್ಲಿ ಏಕಾಏಕಿ ಕಂಡುಬಂದ ಐದು ಗಾಯಗಳಿಂದ 50 ವರ್ಷಗಳ ಕಾಲ ಪಾದ್ರೆ ಪಿಯೊ ಅನೇಕ ಸಂಕಷ್ಟಗಳನ್ನು ಅನುಭವಿಸಬೇಕಾಗಿ ಬಂದಿತ್ತು. ಈ ಸಂದರ್ಭದಲ್ಲಿ ಅವರು ಆಸ್ಪತ್ರೆಯೊಂದನ್ನು ಸ್ಥಾಪಿಸಿ ಜನರಿಗೆ ಕೊಡುಗೆಯಾಗಿ ನೀಡಿದ್ದರು. ಶಿಲುಬೆಯ ಮಹತ್ವ, ಪರಮ ಪ್ರಸಾದದ ಶ್ರೀಮಂತಿಕೆ ಹಾಗೂ ಪಾಪ ನಿವೇದನೆಯ ಸಂಸ್ಕಾರದ ಪ್ರಾಮುಖ್ಯತೆಯನ್ನು ಸಂತ ಪಾದ್ರೆ ಪಿಯೋ ಲೋಕಕ್ಕೆ ತಿಳಿಯಪಡಿಸಿದ್ದಾರೆ. ದೇವರು ನೀಡಿರುವ ಸಂಪತ್ತನ್ನು ಸದ್ಬಳಕೆ ಮಾಡಿಕೊಂಡು ಜೀವನ ಪರಿವರ್ತನೆ ಹೊಂದಿ ಉತ್ತಮ ಬದುಕು ಸಾಗಿಸಲು ಪಾದ್ರೆ ಪಿಯೊ ಪ್ರೇರಣೆಯಾಗಿದ್ದಾರೆ ಎಂದು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ ಹೇಳಿದರು. ಬಲಿಪೂಜೆಗೆ ಮುನ್ನ ಪಾದ್ರೆ ಪಿಯೊ ಅವರ ಸ್ಮರಣಿಕೆಯನ್ನು ಬಿಷಪ್ ಆಶೀರ್ವದಿಸಿದರು. ಪುಣ್ಯ ಕ್ಷೇತ್ರದ ಗುರುಗಳಾದ ಾ.ಡೆರಿಕ್ ಡಿಸೋಜ, ಾ. ಮ್ಯಾಕ್ಸಿಂ ಡಿಸಿಲ್ವಾ ಮತ್ತಿತರರು ಉಪಸ್ಥಿತರಿದ್ದರು. ಪಾದ್ರೆ ಪಿಯೊ ಪುಣ್ಯಕ್ಷೇತ್ರದಲ್ಲಿ ಹಬ್ಬ ಆಚರಣೆಯ ಪ್ರಯುಕ್ತ 9 ದಿನಗಳ ನವೇನಾ ಪ್ರಾರ್ಥನೆ ಸೆ.14ರಂದು ಆರಂಭವಾಗಿತ್ತು. ಹಬ್ಬದ ದಿನವಾದ ರವಿವಾರ ಸಂಜೆಯ ಸಂಭ್ರಮದ ಬಲಿಪೂಜೆಯ ಹೊರತಾಗಿ ಇತರ ಮೂರು ಬಲಿ ಪೂಜೆಗಳು ಜರುಗಿದವು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News