‘ಸಾವಯವ ಕೃಷಿ ಪದ್ಧತಿಯೇ ರೈತರಿಗೆ ಅನುಕೂಲಕರ’

Update: 2018-09-23 17:05 GMT

ಉಡುಪಿ, ಸೆ.23: ಆಧುನೀಕರಣ, ವಾಣಿಜ್ಯೀಕರಣದ ಭರಾಟೆ, ಸರಕಾರದ ಬೇಕಾಬಿಟ್ಟಿ ಕೃಷಿ ನೀತಿಗಳು ರೈತರನ್ನು ಆತ್ಮಹತ್ಯೆಯತ್ತ ಕೊಂಡೊಯ್ಯುತ್ತಿವೆ. ಈ ನಿಟ್ಟಿನಲ್ಲಿ ಹಿರಿಯರು ಅನುಸರಿಸಿದ ಸಾವಯವ ಕೃಷಿ ಪದ್ಧತಿ ಪ್ರಯೋಗ ಮಾಡಿ, ಈಗಿನ ಸ್ಥಿತಿಗತಿಗಳಿಗೆ ಒಗ್ಗಿಸಿದರೆ ನಮ್ಮ ತೋಟ, ನಮ್ಮ ಅಡುಗೆ ಮನೆ ಅಲ್ಲದೆ ನಮ್ಮ ಪರಿಸರವನ್ನು ಕೂಡಾ ವಿಷಮುಕ್ತಗೊಳ್ಳಬಲ್ಲದು ಎಂದು ತೀರ್ಥಹಳ್ಳಿ ಕೃಷಿ ಪ್ರಯೋಗ ಪರಿವಾರದ ನಿರ್ದೇಶಕ ಅರುಣ್ ಕುಮಾರ್ ಕೆ.ವಿ. ಹೇಳಿದ್ದಾರೆ.

ಉಡುಪಿ ಜಿಲ್ಲಾ ಕೃಷಿಕ ಸಂಘ ಮತ್ತು ಮಂಗಳೂರಿನ ವಿಜಯಾ ಗ್ರಾಮೀಣಾ ಭಿವೃದ್ಧಿ ಪ್ರತಿಷ್ಠಾನಗಳು ಉಡುಪಿ ರೆಸಿಡೆನ್ಸಿ ಹೊಟೇಲ್ ಸಭಾಂಗಣದಲ್ಲಿ ಆಯೋಜಿಸಿದ್ದ ಸಾವಯವ ಕೃಷಿ ಮಾಹಿತಿ ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮವನ್ನು ವಿಜಯಾ ಬ್ಯಾಂಕ್ ಉಡುಪಿ ವಿಭಾಗದ ಪ್ರಾದೇಶಿಕ ಪ್ರಬಂದಕ ಕೆ.ಆರ್. ರವಿಚಂದ್ರನ್ ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ವಿಜಯಾ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸದಾಶಿವ ಆಚಾರ್, ದಿನೇಶ್ ಶೆಟ್ಟಿ ಹೆರ್ಗ ಉಪಸ್ಥಿತರಿದ್ದರು.

  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News