ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲ ಮಹಾಸಭೆ

Update: 2018-09-24 12:02 GMT

ಬಂಟ್ವಾಳ, ಸೆ. 24: ದ.ಕ.ಜಿಲ್ಲಾ ಮೂರ್ತೆದಾರರ ಸಹಕಾರಿ ಮಹಾಮಂಡಲದ ವಾರ್ಷಿಕ ಮಹಾಸಭೆಯು ರವಿವಾರ ಮೆಲ್ಕಾರ್ ಬಿರ್ವ ಸೆಂಟರ್ ಸಭಾಂಗಣದಲ್ಲಿ ನಡೆಯಿತು. ಮಹಾಮಂಡಲದ ಅಧ್ಯಕ್ಷ ಕೆ.ಸಂಜೀವ ಪೂಜಾರಿ ಬೊಳ್ಳಾಯಿ ಅಧ್ಯಕ್ಷತೆ ವಹಿಸಿದ್ದರು. 

ಮುಂದಿನ ಹತ್ತು ವರ್ಷಗಳ ಅವಧಿಯಲ್ಲಿ ಮಹಾಮಂಡಲದ ವತಿಯಿಂದ ನೂರು ಶಾಖೆಗಳನ್ನು ತೆರೆಯುವ ಗುರಿ ಇರಿಸಲಾಗಿದೆ. ಜಿಲ್ಲೆಯ ಎಲ್ಲಾ ಮೂರ್ತೆದಾರರ ಸಹಕಾರಿ ಸಂಘಗಳು ತಮ್ಮ ವ್ಯಾಪ್ತಿಯಲ್ಲಿ ಕನಿಷ್ಠ ಐದು ಶಾಖೆಗಳನ್ನು ತೆರೆಯಲು ಪ್ರಯತ್ನಿಸಬೇಕಾಗಿದೆ. ಸಹಕಾರಿ ಸಂಘಗಳು ತಮ್ಮಲ್ಲಿರುವ ಹೆಚ್ಚುವರಿ ಹಣವನ್ನು ಮಹಾಮಂಡಲ ಮೂಲಕ ಇತರ ಮೂರ್ತೆದಾರರ ಬ್ಯಾಂಕ್‍ಗಳಿಗೆ ಡೆಪಾಸಿಟ್ ಮಾಡುವರೇ ಪ್ರಯತ್ನಿಸಲಾಗುವುದು. ಕ್ಷೇಮನಿಧಿ ದೊರಕಿಸಿಕೊಡುವ ಬಗ್ಗೆಯೂ ಸರಕಾರದ ಮಟ್ಟದಲ್ಲಿ ಪ್ರಯತ್ನ ನಡೆಸಲಾಗುವುದು ಎಂದು ಅಧ್ಯಕ್ಷ ಕೆ. ಸಂಜೀವ ಪೂಜಾರಿ ಬೊಳ್ಳಾಯಿ ಹೇಳಿದರು.

ಉಪಾಧ್ಯಕ್ಷ ಶಿವಪ್ಪ ಸುವರ್ಣ, ನಿರ್ದೇಶಕ ವಿಜಯ ಕುಮಾರ್ ಸೊರಕೆ, ಅಣ್ಣಿ ಯಾನೆ ನೋಣಯ್ಯ ಪೂಜಾರಿ, ವಿಶ್ವನಾಥ ಕೆ., ಲಕ್ಷ್ಮಣ್ ಕೋಟ್ಯಾನ್, ರಾಜೇಶ್ ಸುವರ್ಣ, ಪುರುಷ ಎನ್.ಸಾಲಿಯಾನ್, ಆರ್.ಸಿ.ನಾರಾಯಣ್, ವಿಶ್ವನಾಥ್ ಪೂಜಾರಿ, ವಿಶ್ವನಾಥ್ ಬಿ., ಪುಷ್ಪಾವತಿ, ಪ್ರತಿಮ .ಜಿ.ಅಂಚನ್, ಬಿ.ಎಸ್.ಸನಿಲ್ ಉಪಸ್ಥಿತರಿದ್ದರು.

ಅಕ್ಷತಾ ಪ್ರಾರ್ಥಿಸಿದರು. ವಿಜಯ ಕುಮಾರ್ ಸೊರಕೆ ಸ್ವಾಗತಿಸಿ, ಬೇಬಿ ಕುಂದರ್ ವಂದಿಸಿ, ರಮೇಶ್ ಅನ್ನಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News