ಸೆ.29: ಎ.ಜೆ. ಆಸ್ಪತ್ರೆಯಲ್ಲಿ ಮಕ್ಕಳ ಹೃದ್ರೋಗ ಉಚಿತ ತಪಾಸಣಾ ಶಿಬಿರ

Update: 2018-09-24 12:05 GMT

ಮಂಗಳೂರು, ಸೆ.24: ವಿಶ್ವ ಹೃದಯ ದಿನದ ಅಂಗವಾಗಿ ಸೆ.29ರಂದು ನಗರದ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹೊರರೋಗಿ ವಿಭಾಗದಲ್ಲಿ ಮಕ್ಕಳ ಹೃದ್ರೋಗ ಉಚಿತ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಶಿಬಿರದಲ್ಲಿ ಭಾಗವಹಿಸುವ ಶಿಬಿರಾರ್ಥಿಗಳಿಗೆ ಉಚಿತ ವೈದ್ಯಕೀಯ ಸಲಹೆ/ಸೂಚನೆಗಳು ಮತ್ತು ಎಕೋ ಕಾರ್ಡಿಯೋಗ್ರಾಫಿಯನ್ನು 50 ಶೇ. ರಿಯಾಯಿತಿ ದರದಲ್ಲಿ ಮಾಡಲಾಗುತ್ತದೆ. 

ಶಿಬಿರದಲ್ಲಿ ಪಾಲ್ಗೊಂಡ ಮಗುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ರಿಯಾಯಿತಿ ದರದಲ್ಲಿ ನೀಡಲಾಗುವುದು. ಶಿಬಿರದಲ್ಲಿ ಪರಿಣತ ಮಕ್ಕಳ ಹೃದ್ರೋಗತಜ್ಞ ಡಾ.ಪ್ರೇಮ್‌ಆಳ್ವ ಮತ್ತು ಮಕ್ಕಳ ಹೃದ್ರೋಗ ಶಸ್ತ್ರಚಿಕಿತ್ಸಾ ತಜ್ಞ ಡಾ.ಗೌರವ್ ಶೆಟ್ಟಿ ಲಭ್ಯರಿರುವರು.

ಹೃದಯ ತೊಂದರೆಯಿಂದ ಬಳಲುತ್ತಿರುವ ಮಕ್ಕಳು, ಮಕ್ಕಳು ಅಳುವಾಗ ಮೈ ನೀಲಿಗಟ್ಟುವುದು, ಮಕ್ಕಳಲ್ಲಿ ಆಗಾಗ ಕಂಡುಬರುವ ಉಸಿರಾಟದ ತೊಂದರೆ, ಆಟ ಆಡುವಾಗ ಮಕ್ಕಳಲ್ಲಿ ಕಂಡುಬರುವ ಉಸಿರಾಟದ ತೊಂದರೆ ಇತ್ಯಾದಿ ಸಮಸ್ಯೆಗಳಿದ್ದಲ್ಲಿ ಈ ಶಿಬಿರದ ಪ್ರಯೋಜನ ಪಡೆಯಬಹುದು.

ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ದೂ.ಸಂ. 0824 - 6613252 / 8494890600 ಅನ್ನು ಸಂಪರ್ಕಿಸಬಹುದು. ಅಥವಾ ಇಮೇಲ್ ವಿಳಾಸ: marketing@ajhospital.in ಅಥವಾ  ajhospitalmarketing@gmail.com ಅನ್ನು ಸಂಪರ್ಕಿಸುವಂತೆ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News