ಪ.ಬಂಗಾಳ: ಕಾನ್‌ಸ್ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ, 42 ಜನರ ಬಂಧನ

Update: 2018-09-24 14:01 GMT

ಕೋಲ್ಕತಾ, ಸೆ.24: ಪೊಲೀಸ್ ಕಾನ್‌ಸ್ಟೇಬಲ್‌ಗಳ ನೇಮಕಕ್ಕಾಗಿ ನಡೆಸಲಾಗಿದ್ದ ಲಿಖಿತ ಪರೀಕ್ಷೆಯಲ್ಲಿ ಅಕ್ರಮ ಮಾರ್ಗಗಳನ್ನು ಅನುಸರಿಸಿದ್ದ ಆರೋಪದಲ್ಲಿ 42 ಅಭ್ಯರ್ಥಿಗಳನ್ನು ಪಶ್ಚಿಮ ಬಂಗಾಳದ ಸಿಐಡಿ ಪೊಲೀಸರು ಬಂಧಿಸಿದ್ದು,ಅವರ ವಿರುದ್ಧ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗಿದೆ.

ರವಿವಾರ ನಡೆದಿದ್ದ ಪರೀಕ್ಷೆಯ ಸಂದರ್ಭದಲ್ಲಿ ಆರೋಪಿಗಳು ಕ್ರೆಡಿಟ್ ಕಾರ್ಡ್ ರೂಪದಲ್ಲಿಯ ರಿಸೀವರ್ ಮತ್ತು ಇಯರ್‌ಪೋನ್ ಒಳಗೊಂಡ ಆಧುನಿಕ ನಿಸ್ತಂತು ಸಾಧನಗಳನ್ನು ಬಳಸಿದ್ದು,ಇವುಗಳನ್ನು ಶೂ ಮತ್ತು ಚಪ್ಪಲಿಗಳ ಅಟ್ಟೆಗಳಲ್ಲಿ ಅಡಗಿಸಿದ್ದರು. ಈ ಬಗ್ಗೆ ಮಾಹಿತಿ ಪಡೆದಿದ್ದ ಪೊಲೀಸರು ದಾಳಿ ನಡೆಸಿದಾಗ ಮೈಕ್ರೋ ಇಯರ್‌ಪೀಸ್‌ಗಳೂ ಪತ್ತೆಯಾಗಿದ್ದವು. ಈ ಸಾಧನಗಳನ್ನು ಮೊಬೈಲ್ ಫೋನ್‌ನೊಂದಿಗೆ ಜೋಡಿಸಿದರೆ ಪರೀಕ್ಷಾ ಕೆಂದ್ರದ ಹೊರಗಿನಿಂದ ಅಭ್ಯರ್ಥಿಗಳ ಸಹಚರರು ಅವುಗಳನ್ನು ನಿರ್ವಹಿಸಲು ಸಾಧ್ಯವಾಗುತ್ತಿತ್ತು ಎಂದು ಹಿರಿಯ ಸಿಐಡಿ ಅಧಿಕಾರಿಯೋರ್ವರು ಸೋಮವಾರ ಇಲ್ಲಿ ತಿಳಿಸಿದರು. ಈ ಅಕ್ರಮಗಳ ಹಿಂದೆ ಜಾಲವೊಂದು ಇರುವ ಸಾಧ್ಯತೆಯಿದ್ದು,ಅದನ್ನು ಭೇದಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News