ಮಂಗಳೂರು ತಾಲೂಕು ಎನ್‌ಪಿಎಸ್ ಸರಕಾರಿ ನೌಕರರ ಘಟಕ ರಚನೆ

Update: 2018-09-24 14:19 GMT

ಮಂಗಳೂರು, ಸೆ.24: ನೂತನ ಪಿಂಚಣಿ ವ್ಯವಸ್ಥೆಗೊಳಪಟ್ಟ (ಎನ್‌ಪಿಎಸ್) ಮಂಗಳೂರು ತಾಲೂಕು ಸರಕಾರಿ ನೌಕರರ ಸಮಿತಿಯ ರಚನೆ ಹಾಗೂ ಎನ್‌ಪಿಎಸ್ ಜಾಗೃತಿ ಕಾರ್ಯಾಗಾರವು ನಗರದ ಜಿಲ್ಲಾ ವೆನ್ಲಾಕ್ ಆ್ಪತ್ರೆಯ ಸಭಾಂಗಣದಲ್ಲಿ ನಡೆಯಿತು.
ಎನ್‌ಪಿಎಸ್ ಸರಕಾರಿ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ಸಂಚಾಲಕ ರವಿ ಎಸ್.ಪೂಜಾರಿ ಕಾರ್ಯಗಾರದಲ್ಲಿ ವಿಷಯ ಮಂಡಿಸಿದರು.
  
ಎನ್‌ಪಿಎಸ್ ಸರಕಾರಿ ನೌಕರರ ದ.ಕ.ಜಿಲ್ಲಾ ಘಟಕದ ಇಬ್ರಾಹಿಂ ಎಂ. ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಎನ್‌ಪಿಎಸ್ ರಾಜ್ಯ ಸಂಘದ ಪ್ರತಿನಿಧಿ ಯತೀಶ್ ಬಂಟ್ವಾಳ, ರಾಜ್ಯ ಸಮಿತಿ ಸದಸ್ಯ ವಿದ್ಯಾಧರ್ ರೈ ಪುತ್ತೂರು, ಜಿಲ್ಲಾ ಸಂಚಾಲಕ ಕ್ಯಾತಲಿಂಗ ಎಸ್.ಕೆ., ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷ ಸಂತೋಷ್, ಮೂಡುಬಿದಿರೆ ತಾಲೂಕು ಅಧ್ಯಕ್ಷ ಬಸಪ್ಪ ನಾಶಿ ಉಪಸ್ಥಿತರಿದ್ದರು. ಅ.3ರ ‘ರಕ್ತ ಕೊಟ್ಟೇವು-ಪಿಂಚಣಿ ಬಿಡೆವು’ ರಕ್ತದಾನ ಆಂದೋಲನದ ಕುರಿತು ಪುತ್ತೂರು ಘಟಕದ ಕಾರ್ಯದರ್ಶಿ ವಿಮಲ್ ನೆಲ್ಯಾ ಡಿ ಮಾತನಾಡಿದರು.

ಜಿಲ್ಲಾ ಕಾರ್ಯದರ್ಶಿ ಆದರ್ಶ ಸ್ವಾಗತಿಸಿದರು. ಜಿಲ್ಲಾ ಸಹ ಕಾರ್ಯದರ್ಶಿ ರಾಜೇಶ್ ನೆಲ್ಯಾಡಿ ವಂದಿಸಿದರು. ಪುತ್ತೂರು ಸಂಘಟಾ ಕಾರ್ಯದರ್ಶಿ ಅಶ್ರಫ್ ನಿರೂಪಿಸಿದರು.

ಮಂಗಳೂರು ತಾಲೂಕು ಘಟಕ ರಚನೆ: ಅಧ್ಯಕ್ಷರಾಗಿ ಚಂದ್ರನಾಥ್ ಎಂ. (ಉಪನ್ಯಾಸಕರು), ಕಾರ್ಯದರ್ಶಿಯಾಗಿ ಶರತ್ ಬಂಗೇರಾ (ಶಿಕ್ಷಕರು), ಸಂಚಾಲಕರಾಗಿ ಚಂದ್ರಶೇಖರ (ಸಹಾಯಕ ಪ್ರಾಧ್ಯಾಪಕರು), ಉಪಾಧ್ಯಕ್ಷರಾಗಿ ಲಕ್ಷ್ಮೀಕಾಂತ್, ಶೇಸಪ್ಪ, ಡಾ.ನವೀನ್, ರಾಜು ಪವಾರ್, ಚಂದ್ರಶೇಖರ, ಕೋಶಾಧಿಕಾರಿಯಾಗಿ ಪೂರ್ಣಿಮಾ, ಅಂತರಿಕ ಲೆಕ್ಕ ಪರಿಶೋಧಕರಾಗಿ ಟ್ರೀಜಾ ತೆರೆಸಾ, ಜಂಟಿ ಕಾರ್ಯದರ್ಶಿಯಾಗಿ ಫ್ಲೇವಿ, ಕರಿಬಸಪ್ಪಬಿ.ಸಿ., ಸುನಿಲ್, ಸಂಘಟನಾ ಕಾರ್ಯದರ್ಶಿಯಾಗಿ ಕೃಷ್ಣ ನಾಯ್ಕ, ಇಬ್ರಾಹೀಂ ಖಲೀಲ್, ಅವಿನಾಶ್, ನಾಗಮಣಿ, ಪ್ರೀತಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಪುನೀತ್ ಕುಮಾರ್, ಪೂರ್ಣಿಮಾ, ಭಾಗ್ಯ ಎಚ್.ಎಲ್, ವಿಶ್ವನಾಥ ಬದಿಕಾನ, ಶ್ರೀನಿವಾಸ, ವಸುಧಾ, ಶಂಕರ್ ಶೆಟ್ಟಿ, ವಿಶ್ವನಾಥ್, ನವೀನ್ ಡಿಸೋಜ, ಅನೀಶ್, ಶ್ವೇತಾ ಆಯ್ಕೆಯಾಗಿದ್ದಾರೆ.

ಗೌರವ ಸಲಹೆಗಾರರಾಗಿ ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್ ಶಾ, ಡಿಡಿಪಿಐ ಕಚೇರಿಯ ವಿಷಯ ಪರಿವೀಕ್ಷಕ ಶಮಂತ್, ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿಯ ಮುಖ್ಯಸ್ಥ ಡಾ. ಶರತ್ ಆಯ್ಕೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News