ಪುಸ್ತಕಗಳಿಂದ ಮನಸ್ಸು ಶ್ರೀಮಂತ: ಪೂರ್ಣಿಮಾ ಸುರೇಶ್

Update: 2018-09-24 14:34 GMT

ಉಡುಪಿ, ಸೆ.24: ಪುಸ್ತಕಗಳು ಮನಸ್ಸನ್ನು ಶ್ರೀಮಂತ ಹಾಗೂ ಜಾಗೃತಗೊಳಿ ಸುವ ಕೆಲಸ ಮಾಡುತ್ತವೆ. ಸಂಬಂಧಗಳ ಮೌಲ್ಯಗಳನ್ನು ತಿಳಿಸುವ ಪುಸ್ತಕಗಳನ್ನು ವಿದ್ಯಾರ್ಥಿಗಳು ಹೆಚ್ಚು ಓದಬೇಕು ಎಂದು ಉಡುಪಿ ಅಮೋಘ ನಿರ್ದೇಶಕಿ ಪೂರ್ಣಿಮಾ ಸುರೇಶ್ ಹೇಳಿದ್ದಾರೆ.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಕನ್ನಡ ವಿಭಾಗದ ವತಿಯಿಂದ ಕನ್ನಡ ಉಪನ್ಯಾಸಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಅವರ ‘ತೆರೆ’ ಹಾಗೂ ‘ಹಾಡು ಹರಟೆ’ ಕೃತಿಗಳನ್ನು ಸೋಮವಾರ ಕಾಲೇಜಿನ ಮಿನಿ ಆಡಿಟೋರಿಯಂನಲ್ಲಿ ಬಿಡುಗಡೆ ಗೊಳಿಸಿ ಅವರು ಮಾತನಾಡುತಿದ್ದರು.

ಬದುಕು, ಜಗತ್ತು ಹಾಗೂ ನಾವು ಏನು ಮಾಡಬೇಕು ಎಂಬುದನ್ನು ಪುಸ್ತಕ ಮಾತ್ರ ಹೇಳಲು ಸಾಧ್ಯ. ಆದರೆ ಇಂದಿನ ವೇಗದ ಜಗತ್ತಿನಲ್ಲಿ ನಾವು ಪುಸ್ತಕವನ್ನು ಮರೆತು ಇಂಟರ್‌ನೆಟ್, ಮೊಬೈಲ್, ಟಿವಿಯ ದಾಸರಾಗುತ್ತಿದ್ದೇವೆ. ಆದುದ ರಿಂದ ನಮ್ಮ ದೃಷ್ಠಿಕೋನವನ್ನು ಬದಲಾಯಿಸಿ ಪುಸ್ತಕ ಓದುವ ಹವ್ಯಾಸವನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಜಗದೀಶ್ ಶೆಟ್ಟಿ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ರಾವ್ ಸಿದ್ಧಾಪುರ, ಲೇಖಕಿ ಡಾ.ಪ್ರಜ್ಞಾ ಮಾರ್ಪಳ್ಳಿ ಉಪಸ್ಥಿತರಿದ್ದರು. ಅಮೃತಾ ಸ್ವಾಗತಿಸಿದರು. ಅನಂತ ರಾಜ್ ವಂದಿಸಿದರು. ಪ್ರೀತಿಕಾ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News